June 30, 2026
images

ಅನ್ಯಕೋಮಿನ ಯುವಕನ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ ನಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಮಪುರ ಪಟ್ಟಣದಲ್ಲಿ ನಡೆದಿದೆ ವೇಗವಾಗಿ ಬೈಕೋಡಿಸಿದ ಅಂತ ಜಹೀದ್ (18) ಎನ್ನುವ ಯುವಕನ ಮೇಲೆ ಬಿಜೆಪಿ ಮುಖಂಡ ಸಂತೋಷ್ ಮನಸ್ಸು ಇಚ್ಛೆ ಹಲ್ಲೆ ಮಾಡಿದ್ದಾನೆ.

ಅಜ್ಜಂಪುರ ಪಟ್ಟಣ ಪಂಚಾಯಿತಿ ಸದಸ್ಯ ಶೋಭಾ ಪತಿ ಸಂತೋಷ್ ಎಂದು ತಿಳಿದುಬಂದಿದ್ದು, ಗಂಭೀರ ಗಾಯಗೊಂಡ ಜಹೀದ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೈತುಂಬ ಬಾಸುಂಡೆ ಬರುವ ಹಾಗೆ ಹೊಡೆದಿದ್ದು ಅಲ್ಲದೇ ಕೊಲೆ ಮಾಡೋದಾಗಿ ಬೆದರಿಕೆ ಆರೋಪ ಸಹ ಕೇಳಿ ಬಂದಿದೆ. ಬಿಜೆಪಿ ಮುಖಂಡ ಸಂತೋಷ್ ವಿರುದ್ಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಅಪಾಯ ದಾಖಲಾಗಿದೆ.

About The Author

Leave a Reply