

ಜಪಾನ್‌ನ ಯುವಕನೊಬ್ಬ ನಾಯಿಯಾಗಿ ಪರಿವರ್ತಿಸಲು ಬಯಸಿದ್ದ. ಅಷ್ಟೇ ಅಲ್ಲದೆ ಈ ಶಸ್ತ್ರಚಿಕಿತ್ಸೆ ಮಾಡಲು ಸುಮಾರು 2.2 ಬಿಲಿಯನ್ ರುಪಾಯಿ (220 ಕೋಟಿ ರುಪಾಯಿ) ಖರ್ಚು ಮಾಡಿದ್ದಾನೆ ಎನ್ನುವ ಸುದ್ದಿ ಹಬ್ಬಿದೆ. ಯುವಕ ಹಲವು ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗಿದ್ದು, ಈಗ ನಾಯಿಯಂತಹ ನಡವಳಿಕೆ ಮತ್ತು ದೈಹಿಕ ನೋಟವನ್ನು ಹೊಂದಿದ್ದಾನೆ ಎನ್ನುವ ಪೋಸ್ಟ್ ವೈರಲ್ ಆಗಿದೆ. 26 ವರ್ಷದ ಮಿಲಿಯನೇರ್ ಜಾಸೊ ತನ್ನನ್ನು ತಾನು ನಾಯಿಯಂತೆ ಕಾಣುವಂತೆ ಮಾಡಲು ಸುಮಾರು 2.2 ಬಿಲಿಯನ್ ರುಪಾಯಿಗಳನ್ನು ಖರ್ಚು ಮಾಡಿದ್ದ ಎಂದು ಹಲವು ದಿನಗಳಿಂದ ಹಬ್ಬುತ್ತಿದ್ದ ಸುದ್ದಿಯಾಗಿದೆ. ಸರ್ಜರಿ ಕೂಡ ಮಾಡಿಸಿಕೊಂಡಿದ್ದು ಈಗ ಸಂಪೂರ್ಣ ನಾಯಿಯಂತೆ ವರ್ತನೆ ತೋರುತ್ತಿದ್ದಾನೆ ಎನ್ನಲಾಗಿದೆ. ಆದರೆ ಈ ಘಟನೆಯ ಅಸಲಿಯತ್ತೇ ಬೇರೆ ಇದೆ. ಈತನ ಅಸಲಿ ಹೆಸರು ‘ಟೊಕೊ’ ಆಗಿದ್ದು ಈತನನ್ನು ಸೋಷಿಯಲ್ ಮೀಡಿಯಾದಲ್ಲಿ ‘ಜಾಸೋ’ ಎಂದು ಕರೆಯಲಾಗುತ್ತದೆ. ಈತ “ಐ ವಾಂಟ್ ಟು ಬಿ ಆನ್ ಅನಿಮಲ್” ಎಂಬ ಯುಟ್ಯೂಬ್ ಚಾನಲ್ ಕೂಡ ಮಾಡಿಕೊಂಡಿದ್ದಾನೆ. ಈತ ಇದಕ್ಕಾಗಿ ಖರ್ಚು ಮಾಡಿದ್ದು 220 ಕೋಟಿ ರುಪಾಯಿ ಅಲ್ಲ ಬದಲಿಗೆ ಅಂದರೆ ಭಾರತೀಯ ರುಪಾಯಿ ಮೌಲ್ಯದಲ್ಲಿ ಸುಮಾರು 11ರಿಂದ 12 ಲಕ್ಷ. ಆದರೆ ಈತ ನಾಯಿಯಂತೆ ಕಾಣಲು ಯಾವುದೇ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿಲ್ಲ, ಬದಲಿಗೆ ಜಪಾನ್ ಮನರಂಜನಾ ಶೋಗಳಿಗಾಗಿ ಸ್ಪೆಷಲ್ ಎಫೆಕ್ಟ್ಸ್ ‘ಝೆಪ್ಪೆಟ್’ ಎಂಬ ಸಂಸ್ಥೆಗೆ ಹಣ ನೀಡಿ ನಾಯಿಯಂತೆ ನೈಜವಾಗಿ ಕಾಣುವ ಕಾಸ್ಟ್ಯೂಮ್ ತಯಾರಿಸಿಕೊಂಡಿದ್ದಾನೆ.






