

ಮಂಗಳೂರು: ನಗರದ ಜಿಲ್ಲಾ ಖಜಾನೆ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ (ಎಫ್‌ಡಿಎ) ಕಾರ್ಯನಿರ್ವಹಿಸುತ್ತಿದ್ದ ಬೆಂಗಳೂರಿನ ನಿವಾಸಿ ರೋಹನ್ ಎಂ. (33) ಎಂಬುವವರು ಆಗಸ್ಟ್ ೧ರಿಂದ ನಾಪತ್ತೆಯಾಗಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.
ಬೆಂಗಳೂರಿನ ನಂಜಮ್ಮ ಲೇಔಟ್ ನಿವಾಸಿ ಮುನಿರಾಜ್ ರೆಡ್ಡಿ ಅವರ ಪುತ್ರ ರೋಹನ್, ಕಳೆದ ಎರಡು ವರ್ಷಗಳಿಂದ ಮಂಗಳೂರಿನ ಜಿಲ್ಲಾ ಖಜಾನೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಹುಣ್ಣಿಮೆಯ ಹಿನ್ನೆಲೆ ಗುಜರಾತ್‌ಗೆ ತೆರಳುವುದಾಗಿ ತಿಳಿಸಿ ರೋಹನ್ ಮನೆಯಿಂದ ಹೊರಟಿದ್ದರು. ಆದರೆ, ಬಳಿಕ ಅವರು ವಾಪಸ್ ಆಗಿಲ್ಲ. ನಾಪತ್ತೆಯಾದ ಬಳಿಕ ಅವರ ಮೊಬೈಲ್ ಫೋನ್ ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ದೂರು ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ರೋಹನ್ ಅವರ ತಂದೆ ಮುನಿರಾಜ್ ರೆಡ್ಡಿ ಅವರು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.






