August 19, 2026
AA-140626-miss

ಮಂಗಳೂರು: ಕೊಟ್ಟಾರ ಚೌಕಿಯಲ್ಲಿ ಔಷಧಕ್ಕೆ ಸಂಬಂಧಿತ ಕಚೇರಿಯನ್ನುನಡೆಸುತ್ತಿದ್ದ ಉದ್ಯಮಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಾಪತ್ತೆಯಾದ ವ್ಯಕ್ತಿಯನ್ನು ಸುನೀಲ್ ಬಿ. ಎಸ್. (36) ಎಂದು ಗುರುತಿಸಲಾಗಿದೆ. ಅವರು ಬಿಜೈನಲ್ಲಿರುವ ಪಿಜಿ ಯೊಂದರಲ್ಲಿ ವಾಸಿಸುತ್ತಿದ್ದರು.ಕುಟುಂಬದವರು ನೀಡಿರುವ ದೂರಿನ ಪ್ರಕಾರ, ಸುನೀಲ್ ಜೂನ್ 12 ರ ಸಂಜೆ ತಮ್ಮ ಕಚೇರಿಯ ಕೆಲಸವನ್ನು ಮುಗಿಸಿ, ರಾತ್ರಿ ಸುಮಾರು 9 ಗಂಟೆಗೆ ತಮ್ಮ ಸಹೋದರಿಯ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದರು.ಆ ಸಂದೇಶ ಕಳುಹಿಸಿದ ತಕ್ಷಣವೇ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅಂದಿನಿಂದ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಮತ್ತು ನಾಪತ್ತೆಯಾಗಿದ್ದಾರೆ.ಕುಟುಂಬ ಸದಸ್ಯರು ಎಲ್ಲೆಡೆ ಹುಡುಕಾಟ ನಡೆಸಿದರೂ ಅವರು ಪತ್ತೆಯಾಗದ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಉರ್ವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

About The Author

Leave a Reply