June 25, 2026
image-43

ಬೆಳ್ತಂಗಡಿ: ತಾಲೂಕಿನ ಬೆಳಾಲು ಗ್ರಾಮದ ಮಿನಂದೇಲುವಿನಲ್ಲಿ ಸ್ಕೂಟಿಯೊಂದು ಜೂ.12ರಂದು ನಡು ರಸ್ತೆಯಲ್ಲಿ ಹೊತ್ತಿ ಉರಿದು ಘಟನೆಯಲ್ಲಿ ತಂದೆ ಮಗ ಗಾಯಗೊಂಡಿದ್ದರು. ಸದ್ಯ ಗಾಯಗೊಂಡ ಬಾಲಕ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾನೆ. ದಿಯಾನ್ (7) ಮೃತಪಟ್ಟ ಬಾಲಕ.

ಆತ ಬೆಳಾಲು ನಿವಾಸಿ ನಿವೃತ್ತ ಮಾಜಿ ಸೈನಿಕ ಮೋಹನ್ ಗೌಡ ಕಾಡಂಡ ಅವರ ಪುತ್ರ. ಉಜಿರೆಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರ ವಿದ್ಯಾರ್ಥಿ. ಮೋಹನ್ ಗೌಡ ಅವರು ದಿಯಾನ್ ನನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸ್ಕೂಟಿಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಬೆಂಕಿ ಹತ್ತಿಕೊಂಡು ಬಾಲಕನಿಗೆ ತೀವ್ರತರದ ಸುಟ್ಟ ಗಾಯಗಳು ಉಂಟಾಗಿತ್ತು. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೋಹನ್ ಗೌಡ ಕಾಡಂಡ ಅವರಿಗೂ ಗಾಯಗಳಾಗಿದ್ದು ಅವರು ಚೇತರಿಸಿಕೊಂಡಿದ್ದಾರೆ.

About The Author

Leave a Reply