August 11, 2026
WhatsApp Image 2026-08-11 at 12.15.18 PM

ಝಹೀರ್ ಅಬ್ಬಾಸ್ ಹೆಸರು ಕೇಳದವರು ವಿರಳ. ನೊಂದ ಮನಸ್ಸುಗಳಿಗೆ ಸಾಂತ್ವನ ಹಸ್ತವದು. ಬಡವ ಬಲ್ಲಿದನಿಗೆ ಸದಾ ಆಸರೆಯಾಗುವ ಉಮರಾ ನಾಯಕ.
Global Property Solutions ನ CEO. ತಾನು ಸಂಪಾದಿಸಿದ ಸಂಪಾದನೆಯ ಒಂದು ಭಾಗ ಬಡವರಿಗಾಗಿ ಮೀಸಲಿಟ್ಟು, ಪ್ರಸ್ತುತ ಔಲಿಯಾ ಪ್ರೇಮಿಯೂ ಕೂಡ ಆದ ಇವರು ಒದು ಭಾಗ ಇವರ ಖಿದ್ಮತ್‌ಗಾಗಿ ಮೀಸಲಿಟ್ಟು ಹಸಿವಿನಿಂದ ಕೈ ಚಾಚುವ ಹಲವರ ಹಸಿವು ನೀಗಿಸುವ ಅದೃಷ್ಟವುಳ್ಳ ವ್ಯಕ್ತಿ.
Al Ameen Charitable Trustನ ಪ್ರಮುಖ ಸದಸ್ಯರಾಗಿ, Political Social Activitiesನ ಪ್ರಮುಖರಾಗಿ,Voice of Blood Donorsನ ಪ್ರಧಾನ ಕಾರ್ಯದರ್ಶಿಯಾಗಿ ಹಲವು ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹಲವು ಬಾರಿ ರಕ್ತದಾನ ಶಿಭಿರ, ಬಡ ವರರಿಗೆ ಉತ್ತಮ ಕಂಪನಿಯ ವಾಚ್, ಬಡ ಹಾಗೂ ಯತೀಂ ಹೆಣ್ಣ ಮಕ್ಕಳ ಮದುವೆಗೆ ಪ್ರತ್ಯೇಕ ಸಹಾಯ, ರೋಗಿಗಳ ಆರೈಕೆ ಹಾಗೂ ಚಿಕಿತ್ಸಾ ವೆಚ್ಚಗಳು, ನಿರ್ಗತಿಕರ ಆರೈಕೆ, ಬಡ ಉಸ್ತಾದರಿಗೆ ಸಹಾಯ, ರೋಗಿಗಳಿಗೆ ಬೇಕಾದ ವೀಲ್ ಚೇರ್ ಹಾಗೂ ಉಪಕರಣಗಳು. ಸೇರಿದಂತೆ ಉತ್ತಮ ಕಾರ್ಯಕ್ರಮಗಳ ಮೂಲಕ ಜನ ಮನಸ್ಸಿನಲ್ಲಿ ಸ್ಥಾನ ಪಡೆದುಕೊಂಡವರು.


ಅಲ್-ಹಮ್ದುಲಿಲ್ಲಾಹ್ ಇದೀಗ ಅವರ ಬಹುಕಾಲದ ಕನಸಿನಂತೆ ಮೇಲೆ ತಿಳಿಸಲ್ಪಟ್ಟ ಯೋಜನೆ, ಮಂಗಳೂರು ಕೇಂದ್ರೀಕರಿಸಿ ಉಚಿತ ಡಯಾಲಿಸಿಸ್ ಸೆಂಟರ್ ಸೇರಿದಂತೆ ಹಲವು ಪದ್ದತಿಗಳ ಪರಿಷ್ಕಾರದೊಂದಿಗೆ Voice of Trust ಎಂಬ ನಾಮದಡಿಯಲ್ಲಿ ಅದರ ಸ್ಥಾಪಕದ್ಯಕ್ಷರಾಗಿ ಉತ್ತಮ ತಂಡವಂದೊನ್ನು ಕಟ್ಟಿ ಸಮುದಾಯದ ಹಿತಕ್ಕಾಗಿ ಉಪ್ಪಿನಂಗಡಿಯ ಕಡವಿನಬಾಗಿಲ್ಲಿ ನಡೆದ ಫೀರೋಂಕಾ ಫೀರ್ ಉಸ್ತಾದುನಾ ಅಬೂಬಕರ್ ಸಿದ್ದೀಕ್(ರ) ರವರ ಉರೂಸ್ ಮುಬಾರಕ್‌‌ನಲ್ಲಿ ಮಹಾನರಾದ ಮುನೀರ್ ತಂಙಳ್ ಞಂಡಾಡಿ ರವರ ಪ್ರತ್ಯೇಕ ಆಶಿರ್ವಾದದೊಂದಿಗೆ, ಶಿರಿಯ ಉಪ್ಪಾಪರ ಪ್ರಿಯ ಪುತ್ರ ಮಹಾನರಾದ ಜಲೀಲ್ ಉಪ್ಪಾಪ, ಲಕ್ಷದ್ವೀಪ ಮಾಜಿ ಸಂಸದರಾದ ಸಯ್ಯಿದ್ ಫೈಸಲ್ ಹಾಗೂ ಅಹ್ಲ್ ಬೈತ್ ಕಣ್ಮಣಿಗಳಾದ ಅರಿಕ್ಕೋಡ್ ಇಬ್ರಾಹೀಂ ತಂಙಳ್, ಶುಹೈಬ್ ತಂಙಳ್ ಲಕ್ಷದ್ವೀಪ, ಕಾಸಿಂ ತಂಙಳ್ ಲಕ್ಷದ್ವೀಪ, ಬಾಸಿತ್ ತಂಙಳ್ ಕುಕ್ಕಾಜೆ,ಹಲವು ಮಹಲ್ ವ್ಯಕ್ತಿಗಳ ನೇತೃತ್ವದಲ್ಲಿ ಲೋಗೋ ಲಾಂಚಿಂಗ್ ನಡೆಸುವ ಮೂಲಕ ಸಮೂಹಕ್ಕೆ ಸಮರ್ಪಿಸಿದರು.
ಅಲ್ಲಾಹನ ತೃಪ್ತಿಗೋಸ್ಕರ ಜನಸೇವರಗೆಯ್ಯಲು ತೌಫೀಕ್ ನೀಡಲಿ-ಆಮೀನ್.

About The Author

Leave a Reply