

ಆನ್ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ಸಿಕ್ಕಾಪಟ್ಟೆ ಸಾಲ ಮಾಡಿಕೊಂಡು ಗ್ರಹಿಣಿ ಒಬ್ಬರು ನೇಣು ತೆಗೆದು ಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಗೃಹಿಣಿಯನ್ನು ರಂಜಿತಾ ಎಂದು ತಿಳಿದುಬಂದಿದೆ.
ಒಂದು ವರ್ಷದ ಹಿಂದೆ ಆನ್ಲೈನ್ ಗೇಮ್ ಚಟಕ್ಕೆ ರಂಜಿತಾ ಬಿದ್ದಿದ್ದಾಳೆ. ನೆಲಮಂಗಲ ಖಾಸಗಿ ಕಂಪನಿ ಒಂದರಲ್ಲಿ ರಂಜಿತ ಕೆಲಸ ಮಾಡುತ್ತಿದ್ದಳು ರಂಜಿತ ತಾಯಿ ಹಾಗೂ ಪತಿ 15 ಲಕ್ಷ ರೂಪಾಯಿ ಸಾಲ ತೀರಿಸಿದ್ದರು. ಇಷ್ಟಾದರೂ ಸಹ ಗೃಹಿಣಿ ರಂಜಿತ ಆನ್ಲೈನ್ ಗೇಮಿಂಗ್ ಬಿಡದೆ ಮತ್ತೆ ರಂಜಿತಾ ಸಾಲ ಮಾಡಿಕೊಂಡಿದ್ದಳು. ಎರಡು ದಿನದ ಹಿಂದೆYASTEBಪತಿ ಅರುಣ್ ಕಲಬುರ್ಗಿಗೆ ಹೋಗಿದ್ದ. ಈ ವೇಳೆ ಮನೆಯಲ್ಲಿ ರಂಜಿತಾ ನಾಲ್ಕು ವರ್ಷದ ಮಗನ ಜೊತೆಗೆ ಇದ್ದಳು.
ಮನೆಯಲ್ಲಿ ರಂಜಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಹಿಳೆ ಗೇಮಿಂಗ್ ಆಡುತ್ತಿದ್ದ ಬಗ್ಗೆ ಕೇಳಿ ಪೊಲೀಸರು ಸಹ ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ಸದ್ಯ ಮೃತ ದೇಹವನ್ನು ನೆಲಮಂಗಲದ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಶಿಫ್ಟ್ ಮಾಡಲಾಗಿದೆ







