September 8, 2026
WhatsApp Image 2026-09-08 at 12.27.01 PM (1)

ದಿನಾಂಕ 11/08/2026 ರಿಂದ 12/08/2026 ರವರೆಗೆ ಶ್ರಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಮನೋಜ್ ಎ. ಎಸ್. ಭಾಗವಹಿಸಿ, Under-20 Shot Put ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದೇನೆ. ಈ ಸಾಧನೆಯ ಮೂಲಕ ಮುಂದಿನ ಪಾಂಡಿಚೇರಿ ಮತ್ತು ಚೆನ್ನೈನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದೇನೆ.

ಆದ್ದರಿಂದ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ನನಗೆ ಪ್ರಯಾಣ, ವಸತಿ ಹಾಗೂ ಇತರ ಅಗತ್ಯ ಖರ್ಚುಗಳಿಗಾಗಿ ಹಣದ ಅವಶ್ಯಕತೆ ಇದೆ. ಹೀಗಾಗಿ, ನನ್ನ ಕ್ರೀಡಾ ಸಾಧನೆಯನ್ನು ಪ್ರೋತ್ಸಾಹಿಸಿ, ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ತಮ್ಮಿಂದ ಸಾಧ್ಯವಾದಷ್ಟು ಆರ್ಥಿಕ ಸಹಾಯವನ್ನು ಮಾಡುವಂತೆ ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ.

ತಮ್ಮ ಸಹಾಯವು ನನ್ನ ಮುಂದಿನ ಕ್ರೀಡಾ ಸಾಧನೆಗೆ ಬಹಳಷ್ಟು ಪ್ರೋತ್ಸಾಹ ನೀಡುತ್ತದೆ.

About The Author

Leave a Reply