September 22, 2026
WhatsApp Image 2026-09-21 at 11.43.13 AM

ಪುತ್ತೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಟ್ಯಾರ್ ಬ್ರಾಂಚ್ ವತಿಯಿಂದ ಸಂಟ್ಯಾರ್ ಶಾಲಾ ಬಳಿ ಮಾದಕ ವ್ಯಸನದ ದುಷ್ಪರಿಣಾಮದ ಕುರಿತು “ಡ್ರಗ್ಸ್ ದಿ ಕಿಲ್ಲರ್” ಜನ ಜಾಗೃತಿ ಸಭೆಯು ನಡೆಯಿತು.


ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣೆ ಸಂಪ್ಯ ಇದರ ಉಪ ನಿರೀಕ್ಷಕರಾದ ಗುಣಪಾಲ್ ಗೌಡ ಜೆ ರವರು ಮಾತನಾಡಿ ಮಾದಕ ವ್ಯಸನದ ದುಷ್ಪರಿಣಾಮಗಳು ಹಾಗೂ ಅದಕ್ಕೆ ಬಲಿಯಾದರೆ ಎದುರಿಸಬೇಕಾದ ಕಾನೂನು ಕ್ರಮಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಅತಿಥಿಗಳಾಗಿ ಆಗಮಿಸಿದ ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿಯವರಾದ ಉಸ್ಮಾನ್ ಎ.ಕೆ ರವರು ಮಾತನಾಡಿ ಮಾದಕ ವ್ಯಸನ ಎಂಬುದು ಕೇವಲ ಅವನ ಜೀವವನ್ನು ಮಾತ್ರವಲ್ಲದೆ ಇಡೀ ಸಮಾಜಕ್ಕೆ ಕಂಟಕವಾಗಿದೆ, ನಶೆಯನ್ನು ಬಳಸಲು ಪ್ರಾರಂಭಿಸಿ ರೌಡಿಸಂ ಮುಖಾಂತರ ದಾರುಣ ಅಂತ್ಯಕಂಡ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದಿದೆ, ಇಂದು ದೇಶವನ್ನು ಕಟ್ಟಬೇಕಾದ ಯುವ ಸಮೂಹವು ಈ ಜಾಲಕ್ಕೆ ಬಲಿಯಾಗಿ ಮಾದಕ ವ್ಯಸನದಿಂದ ತಮ್ಮ ಅತ್ಯಮೂಲ್ಯವಾದ ಜೀವನವನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ, ಮಾದಕ ವ್ಯಸನಕ್ಕೆ ಬಲಿಯಾಗದಂತೆ ನಮ್ಮ ಯುವತ್ವವನ್ನು ತಡೆಯಬೇಕಾದ, ಮಾದಕ ವ್ಯಸನಿಗಳ ಜಾಲವನ್ನು ತಡೆಯಬೇಕಾದ, ಅವರ ರೌಡಿಸಂನ್ನು ಕಾನೂನಾತ್ಮಕವಾಗಿ ನಿಲ್ಲಿಸಬೇಕಾದ ಬಹುದೊಡ್ಡ ಜವಾಬ್ದಾರಿ ನಮ್ಮ ಮುಂದಿದೆ, ಮಾದಕ ವ್ಯಸನಿಗಳ ಜೊತೆ ಸ್ನೇಹ ಬೆಳೆಸುವುದು ಕೂಡ ಅಪಾಯಕಾರಿಯಾಗಿದ್ದು ಯುವ ಜನತೆಯು ಇದಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.


ಈ ಸಂದರ್ಭದಲ್ಲಿ ಸಂಟ್ಯಾರ್ ಮೊಹಲ್ಲಾ ಐಕ್ಯ ವೇದಿಕೆಯ ಕಾರ್ಯದರ್ಶಿ ಹಮೀದ್ ಕಲ್ಲರ್ಪೆ, ಎಸ್.ಡಿ.ಪಿ.ಐ ಕುಂಬ್ರ ಬ್ಲಾಕ್ ಅಧ್ಯಕ್ಷರಾದ ಇರ್ಶಾದ್ ಜಾರತ್ತಾರ್, ಉಪಾಧ್ಯಕ್ಷರಾದ ಅಶ್ರಫ್ ಎಚ್.ಇ, ಆರ್ಯಾಪು ಗ್ರಾಮ ಸಮಿತಿ ಅಧ್ಯಕ್ಷರಾದ ಹನೀಫ್ ಕಲ್ಲರ್ಪೆ, ಕಾರ್ಯದರ್ಶಿ ಮಸೂದ್ ಸಂಟ್ಯಾರ್, ಸಂಟ್ಯಾರ್ ಬ್ರಾಂಚ್ ಅಧ್ಯಕ್ಷರಾದ ಝಖರಿಯಾ ಸಂಟ್ಯಾರ್ ಹಾಗೂ ಪಕ್ಷದ ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು. ಸಂಟ್ಯಾರ್ ಬ್ರಾಂಚ್ ಕಾರ್ಯದರ್ಶಿ ಶಾಫಿ ಮರಿಕೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

About The Author

Leave a Reply