

ಮಂಗಳೂರು: ಒಬ್ಬ ವ್ಯಕ್ತಿಯ ರಕ್ತದಾನದಿಂದ ಅಮೂಲ್ಯವಾದ ನಾಲ್ಕು ಜೀವಗಳನ್ನು ಉಳಿಸ ಬಹುದು, ರಕ್ತದಾನ ದ ಬಗೆಗಿನ ತಪ್ಪು ಕಲ್ಪನೆ ಹೊಂದದೆ ನಿರಂತರವಾದ ರಕ್ತದಾನದಿಂದ ಆರೋಗ್ಯ ವೃಧ್ಧಿಸಬಹುದು ಎಂದು ಡಾ.ಎಂ. ಜಯಪಾಲ ಶೆಟ್ಟಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಆಂಜನೇಯ ಫ್ರೆಂಡ್ಸ್ ಕ್ಲಬ್ (ರಿ) ಕಣ್ವತೀರ್ಥ. ಇದರ ರಜತಮಹೋತ್ಸವ ದ ವಿಶೇಷ 10ನೇ ತಿಂಗಳ ಕಾರ್ಯಕ್ರಮ ದ ಭಾಗವಾಗಿ ಸರಕಾರಿ ವೆನ್ಲಾಕ್ ಜಿಲ್ಲಾ ಅಸ್ಪತ್ರೆ, ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಮಂಗಳೂರು, ಶ್ರೀ ರಾಮಾಂಜನೇಯ ಸೇವಾ ಸಮಿತಿ, ಕಣ್ವತೀರ್ಥ ಮಠ, ಹಾಗೂ ಕುಲಾಲ ವೇದಿಕೆ ಮಂಜೇಶ್ವರ ಇವರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಶಿಬಿರ ಹಾಗೂ ಬಡರೋಗಿಗಳ ಅಗತ್ಯತೆಗಳ ಪೂರೈಕೆಗಾಗಿ ಬೃಹತ್ ರಕ್ತದಾನ ಶಿಬಿರ ವನ್ನು ಉದ್ಘಾಟಿಸಿ ಮಾತನಾಡಿದರು.

ಈ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕಣ್ವತೀರ್ಥ ದ ಅರ್ಚಕರಾದ ಶ್ರೀ ರಮೇಶ್ ಉಪಾಧ್ಯಾಯ ದೀಪ ಪ್ರಜ್ವಲಿಸಿ ಶುಭಾಷಿಸಿದರು. ಅತಿಥಿಗಳಾಗಿ ಉಪಸ್ಥಿತರಿದ್ದ ಮಂಗಳೂರಿನ ಕುಲಾಲ್ ಹೆಲ್ತ್ ಸೆಂಟರ್ ನ ವೈದ್ಯ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ರಕ್ತದಾನ ಮತ್ತು ಅದರ ನಂತರದ ಪ್ರಕ್ರೀಯೆ ಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ನೌಕಾಸೇನೆಯ ಕಮಾಂಡರ್ ವಿಜಯಕುಮಾರ್, ಜಯಂತ್ ಕುಮಾರ್, ಲ. ಸುಧಾಕರ ಶೆಟ್ಟಿಗಾರ್, ಪ್ರೇಮ ಹೊನ್ನೆ, ಭರತ್ ರಾಜ್ ಕರಾವಳಿ, ವಿನೋದ್ ಕುಮಾರ್ ಬೆಂಗ್ರೆ, ಜಗದೀಶ್ ಬೆಂಗ್ರೆ, ಕಿಶೋರ್ ಕಣ್ವತೀರ್ಥ, ಉದಯ ಕಾರ್ನವರ್, ಗಣೇಶ್ ಆಂಜನೇಯ (ಅಪ್ಪಿ), ಶರತ್ ಆಂಜನೇಯ ಮುಂತಾದವರು ಉಪಸ್ತಿತರಿದ್ದರು.
ಸಮಾಜೀಕ ಕಾರ್ಯ ದಲ್ಲಿ ಸದಾ ಮುಂಚೂಣಿ ಯಲ್ಲಿರುವ ನವೀನ್ ಕುಲಾಲ್ ಮಜಲ್ (ಎನ್ಕೆ ಮಜಲ್) ರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಶಿಬಿರದಲ್ಲಿ ಊರಪರವೂರ ಸಹಕಾರದೊಂದಿಗೆ ಸರಿಸುಮಾರು 96 ಯೂನಿಟ್ ರಕ್ತ ವನ್ನು ಸಂಗ್ರಹಿಸಲಾಯಿತು. ಶಿಬಿರದ ಕಾರ್ಯಕ್ರಮವನ್ನು ಡಾ. ಚಂದ್ರಹಾಸ ಮುಗುಳ್ಯ ನಿರೂಪಿಸಿ ಹರ್ಷೇಂದ್ರ ಕುಲಾಲ್ ಸ್ವಾಗತಿಸಿದರು ಮತ್ತು ಧೀರಜ್ ಹೊನ್ನೆ ವಂದಿಸಿದರು.








