October 5, 2026
WhatsApp Image 2026-10-05 at 10.14.21 AM

ಪುತ್ತೂರಿನ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆಯ ಮಾಲಕ, ಪಾಂಗ್ಲಾಯಿ ನಿವಾಸಿ ಶ್ಯಾಮ ಭಟ್(81) ಅಲ್ಪಕಾಲದ ಅಸೌಖ್ಯದಿಂದ ರವಿವಾರ ರಾತ್ರಿ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಪುತ್ತೂರು ಸೇರಿದಂತೆ ಬೆಂಗಳೂರು, ಮಡಿಕೇರಿ, ಗೋಣಿಕೊಪ್ಪಲು ಹಾಗೂ ಬೆಳ್ತಂಗಡಿಯಲ್ಲಿ ಜ್ಯುವೆಲ್ಸ್ ಮಳಿಗೆ ಹೊಂದಿರುವ ಮುಳಿಯ ಶ್ಯಾಮ ಭಟ್ ಅವರು ಪಾಂಗ್ಲಾಯಿಯಲ್ಲಿರುವ `ಶ್ಯಾಮಲೋಚನಾ’ ನಿವಾಸದಲ್ಲಿ ಮಕ್ಕಳೊಂದಿಗೆ ವಾಸವಿದ್ದರು. ಚಿನ್ನಾಭರಣ ವ್ಯವಹಾರ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಶ್ಯಾಮ ಭಟ್ ಅವರು ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ನಿಧನಕ್ಕೆ ಉದ್ಯಮ ಕ್ಷೇತ್ರದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಅಂತಿಮ ದರ್ಶನ ಹಾಗೂ ನಮನ ಸಲ್ಲಿಸಲು ಅ.6ರಂದು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

About The Author

Leave a Reply