

ಮುಂಬೈ: ಅತ್ತೆ-ಮಾವನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಪೊಲೀಸರು ಆಕೆಯ ಪತಿ ಮತ್ತು ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತ್ರಿಷ್ಣಾ ರಾಹುಲ್ ಸಕ್ಪಾಲ್ ಎಂಬ ಮಹಿಳೆ ನೇಣು ಬಿಗಿದಿದ್ದಾರೆ 2018ರಲ್ಲಿ ರಾಹುಲ್ ಸಕ್ಪಾಲ್ ಅವರನ್ನು ವಿವಾಹವಾಗಿದ್ದರು. ಮಹಿಳೆಯ ತಂದೆ ಬಾಲಕೃಷ್ಣ ನಿಕಮ್ ಅವರು ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾರೆ.
ವಿವಾಹವಾದಗಿನಿಂದಲೂ ತ್ರಿಷ್ಣಾಳ ಪೂರ್ತಿ ವೇತನವನ್ನು ನೀಡುವಂತೆ ಅತ್ತೆ ಮನೆಯವರು ಕಿರುಕುಳ ನೀಡುತ್ತಿದ್ದರು. ತವರು ಮನೆಯ ಫ್ಲ್ಯಾಟ್ ಅನ್ನು ಅತ್ತೆಯ ಹೆಸರಿಗೆ ವರ್ಗಾಯಿಸುವಂತೆ ಮತ್ತು ಮಾವನಿಗಾಗಿ 1 ಕೋಟಿ ರೂಪಾಯಿ ಮೌಲ್ಯದ ಫ್ಲ್ಯಾಟ್ ಅನ್ನು ಖರೀದಿಸುವಂತೆ ನನ್ನ ಮಗಳ ಮೇಲೆ ಒತ್ತಡ ಹೇರಿದ್ದರೆಂದು ನಿಕಮ್ ಆರೋಪಿಸಿದ್ದಾರೆ.







