October 15, 2026
WhatsApp Image 2025-12-02 at 5.49.18 PM

ಮಂಗಳೂರು: ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಿಕಾನ ಫ್ಲೈಓವರ್ ಬಳಿ ಮಾದಕ ವಸ್ತು ಸೇವನೆ ಮಾಡಿರುವ ಆರೋಪದ ಮೇಲೆ 22 ವರ್ಷದ ಯುವಕನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ದಿನಾಂಕ 13-10-2026ರಂದು ಸಂಜೆ 7:30ರ ಸುಮಾರಿಗೆ ಉರ್ವ ಪೊಲೀಸ್ ಠಾಣೆಯ ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕುಂಟಿಕಾನ ಫ್ಲೈಓವರ್ ಬಳಿ ಯುವಕನೊಬ್ಬ ಸಿಗರೇಟ್ ಸೇದುತ್ತಿರುವುದು ಕಂಡುಬಂದಿದೆ. ಆತನನ್ನು ವಿಚಾರಿಸಿದಾಗ ಮಾದಕ ವಸ್ತು ಸೇವನೆಯ ಅಮಲಿನಲ್ಲಿರುವಂತೆ ಮಾತನಾಡುತ್ತಿದ್ದ ಎನ್ನಲಾಗಿದೆ.

ವಿಚಾರಣೆ ವೇಳೆ ಯುವಕನನ್ನು ಮಂಗಳೂರಿನ ಕೊಂಚಾಡಿ, ದೇರೇಬೈಲ್‌ನ ಮೂಕಾಂಬಿಕಾ ದೇವಸ್ಥಾನದ ಸಮೀಪದ ನಿವಾಸಿ ಪವನ್ ರಾಜ್ (22), ಹರೀಶ್ ಅವರ ಪುತ್ರ ಎಂದು ಗುರುತಿಸಲಾಗಿದೆ.

ಬಳಿಕ ಆತನನ್ನು ವಶಕ್ಕೆ ಪಡೆದು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪರೀಕ್ಷೆಯಲ್ಲಿ ನಿಷೇಧಿತ ಮಾದಕ ವಸ್ತುಗಳಾದ ಆಂಫೆಟಮೈನ್ (Amphetamine) ಮತ್ತು ಮೆಥಾಂಫೆಟಮೈನ್ (Methamphetamine) ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.

About The Author

Leave a Reply