

ಗುರುವಾಯನಕೆರೆ: ಇಲ್ಲಿನ ಶಿವಾಜಿನಗರ ನಿವಾಸಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಕಂಪನಿಯ ಟ್ಯಾಂಕರ್ ಚಾಲಕರಾಗಿದ್ದ ಸಮೀರ್ (35) ಅವರು ಮಂಗಳೂರಿನಲ್ಲಿ ಅಕ್ಟೋಬರ್ 23ರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಯುವ ವಯಸ್ಸಿನಲ್ಲೇ ಸಂಭವಿಸಿದ ಅವರ ಅಕಾಲಿಕ ನಿಧನವು ಕುಟುಂಬಸ್ಥರು, ಬಂಧುಮಿತ್ರರು ಹಾಗೂ ಸ್ಥಳೀಯರಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ. ಮೃತರು ತಾಯಿ, ಸಹೋದರ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.






