November 4, 2026
WhatsApp Image 2026-11-04 at 10.32.38 AM

ಪೋಕ್ಸೋ ಪ್ರಕರಣ ಹಾಗೂ ಬಾಲಕಿಯ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಬಂಧಿತನಾಗಿದ್ದ 22 ವರ್ಷದ ಯುವಕನೊಬ್ಬ ನ್ಯಾಯಾಲಯದ ಕಟ್ಟಡದಿಂದ ಜಿಗಿದು ಸಾಯಲು ಯತ್ನಿಸಿದ ಘಟನೆ ಕೇರಳದ ಪೆರುಂಬವೂರಿನಲ್ಲಿ ನಡೆದಿದೆ.

ಅರಕ್ಕಪಾಡಿ ತಾಲೂಕಿನ ಪೆರುಮಣಿ ನಿವಾಸಿ ಮುಹಮ್ಮದ್ ಅದಿನಾನ್ (22) ಯತ್ನಿಸಿದ ಆರೋಪಿ ಎಂದು ಗುರುತಿಸಲಾಗಿದೆ. ಪೆರುಂಬವೂರು ನ್ಯಾಯಾಲಯದ ಮೊದಲ ಮಹಡಿಯಿಂದ ಕೈಕೋಳ ಧರಿಸಿದ್ದ ಸ್ಥಿತಿಯಲ್ಲೇ ಕೆಳಗೆ ಜಿಗಿದಿದ್ದಾನೆ. ಘಟನೆಯಲ್ಲಿ ಆತನಿಗೆ ಗಾಯಗಳಾಗಿದ್ದು, ಗಂಭೀರವಾಗಿಲ್ಲ ಎಂದು ವರದಿ ತಿಳಿಸಿದೆ.

ಬಾಲಕಿಯ ಮನೆಗೆ ನುಗ್ಗಿ ಕೊಲೆಗೆ ಯತ್ನಿಸಿದ ಆರೋಪ:

ಸೋಮವಾರ ಮಧ್ಯಾಹ್ನ ಅದಿನಾನ್ ಸಂತ್ರಸ್ತ ಬಾಲಕಿಯ ಮನೆಗೆ ನುಗ್ಗಿ, ಆಕೆಯ ಕತ್ತು ಕತ್ತರಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ಬಾಲಕಿ ಆತನಿಂದ ತಪ್ಪಿಸಿಕೊಂಡು ಪಾರಾಗಿದ್ದಾಳೆ. ಘಟನೆಯ ಬಳಿಕ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದು, ಬಾಲಕಿಯ ಮನೆಯ ಸಮೀಪದ ಪೊದೆಗಳಲ್ಲಿ ಅಡಗಿದ್ದ ಆತನನ್ನು ಬಂಧಿಸಿದ್ದಾರೆ.

ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಘಟನೆ:

ಬಂಧಿತ ಮುಹಮ್ಮದ್ ಅದಿನಾನ್ನನ್ನು ಪೆರುಂಬವೂರು ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಕರೆತಂದಿದ್ದರು. ಈ ವೇಳೆ ಕೈಕೋಳ ಧರಿಸಿದ್ದ ಆರೋಪಿ ನ್ಯಾಯಾಲಯದ ಕಟ್ಟಡದ ಮೊದಲ ಮಹಡಿಯಿಂದ ಕೆಳಗೆ ಜಿಗಿದು ಸಾಯಲು ಯತ್ನಿಸಿದ್ದಾನೆ. ತಕ್ಷಣವೇ ಆತನಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಗಾಯಗಳು ಗಂಭೀರವಾಗಿಲ್ಲ ಎಂದು ವರದಿ ತಿಳಿಸಿದೆ

About The Author

Leave a Reply