

ಪುತ್ತೂರು: ಮನೆಗೆ ನಡೆದುಕೊಂಡು ಹೋಗುತ್ತಿದ್ದ ಬಾಲಕನಿಗೆ ಅವಾಚ್ಯವಾಗಿ ಬೈದು, ಮನೆ ಅಂಗಳಕ್ಕೆ ನುಗ್ಗಿ ಹಲ್ಲೆ ನಡೆಸಿದ ಘಟನೆ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಿನಾಂಕ 05.10.2026 ರಂದು ರಾತ್ರಿ ಸಂತ್ರಸ್ತ ಬಾಲಕ ತನ್ನ ಮನೆಗೆ ತೆರಳುತ್ತಿದ್ದಾಗ, ಆತನ ಪರಿಚಯದ ಸುಧಾಕರ, ಪೇರಿಗೇರಿ ಚಂದ್ರ, ಹರೀಶ್ ಎಂಬವರು ರಸ್ತೆ ಬದಿಯಲ್ಲಿ ನಿಂತು ಅವಾಚ್ಯವಾಗಿ ಬೈದಿದ್ದಾರೆ. ಬಳಿಕ ಆರೋಪಿಗಳಾದ ಸುಧಾಕರ, ಹರೀಶ್, ಪೇರಿಗೇರಿ ಚಂದ್ರ, ವಸಂತಿ, ಮೋಹನ್, ಗೋವಚಂದ್ರ, ಟಿ.ಸಿ. ಚಂದ್ರ, ಪ್ರಮೀಳ, ಸುಮ ಎಂಬವರು ಬಾಲಕನ ಮನೆಯ ಅಂಗಳಕ್ಕೆ ಬಂದು ಹಲ್ಲೆ ನಡೆಸಿದ್ದಾರೆ.
ಜಗಳ ಬಿಡಿಸಲು ಬಂದ ಬಾಲಕನ ತಾಯಿ ಮತ್ತು ತಂಗಿಯನ್ನುನ್ನೂ ದೂಡಿ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಲ್ಲೆಯಿಂದ ಗಾಯಗೊಂಡ ಬಾಲಕ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.
ಈ ಕುರಿತು ಬಾಲಕನ ಕುಟುಂಬದವರು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಿನಾಂಕ 11.11.2026 ರಂದು ಅ.ಕ್ರ: 140/2026, ಕಲಂ 189(2), 191(2), 329(3), 352, 115(2), 118(1), 351(2), 190 BNS ಹಾಗೂ U/S 75 JJ Act 1986 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ






