

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಒಂದು ಹೊಸ ರೀತಿಯ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರಾಮಾಣಿಕವಾಗಿ ಭೂ ವ್ಯಾಪಾರ ಮಾಡುವವರಿಗೆ, ಉದ್ಯಮಿಗಳಿಗೆ, ಸಣ್ಣ ಪುಟ್ಟ ವ್ಯಾಪಾರ ಮಾಡಿ ಜೀವನ ಮಾಡುವವರಿಗೆ ಈಗ ವ್ಯಾಪಾರ ಮಾಡಲಿಕ್ಕೆ ಭಯ ಪಡುವ ಪರಿಸ್ಥಿತಿ ಬಂದಿದೆ.
ಕಾರಣ ಏನು ಗೊತ್ತಾ?
ಭೂ ವ್ಯಾಪಾರ ಆದ ನಂತರ, ಕೆಲವು ಕೆಲಸ ಇಲ್ಲದ ವ್ಯಕ್ತಿಗಳು ಸ್ಟೇ ಮತ್ತು ಒಬ್ಬ ಲಾಯರ್ ಗಳನ್ನು ಇಟ್ಟುಕೊಂಡು, ವ್ಯಾಪಾರದ ಜಾಗಕ್ಕೆ ಸ್ಟೇ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ. ಇದೊಂದು ದಂಧೆಯಾಗಿ ಬದಲಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಸ್ಟೇ ಹಾಕುವುದೇ ಕೆಲವರಿಗೆ ಉದ್ಯೋಗ!
ಒಬ್ಬ ವ್ಯಕ್ತಿ ಕಷ್ಟಪಟ್ಟು ದುಡ್ಡು ಹಾಕಿ, ಎಲ್ಲಾ ದಾಖಲೆ ಸರಿ ಮಾಡಿ, ಒಂದು ಜಾಗ ಖರೀದಿ ಮಾಡುತ್ತಾನೆ. ವ್ಯಾಪಾರ ಶುರು ಮಾಡಬೇಕು ಅಂತ ಕನಸು ಕಾಣುತ್ತಾನೆ. ಆದರೆ ವ್ಯಾಪಾರ ಶುರು ಮಾಡುವ ಹೊತ್ತಿಗೆ, ಎಲ್ಲಿಂದಲೋ ಒಬ್ಬ ವ್ಯಕ್ತಿ ಬಂದು, ಸ್ಟೇ ತಂದಿದ್ದೇನೆ ಅಂತ ನಿಂತುಬಿಡುತ್ತಾನೆ.
ಇದರಿಂದ ಆ ವ್ಯಾಪಾರಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ. ಅವನ ದುಡ್ಡು ಸಿಲುಕಿಕೊಳ್ಳುತ್ತದೆ, ಅವನ ಕನಸು ನುಚ್ಚು ನೂರಾಗುತ್ತದೆ. ಕೋರ್ಟ್, ಲಾಯರ್, ಸ್ಟೇ ಅಂತ ಅಲೆದಾಡಿ, ಅವನ ಜೀವನವೇ ಹಾಳಾಗುತ್ತದೆ.
ಇದನ್ನು ನೋಡಿದರೆ, ಕೆಲವರಿಗೆ ಕೆಲಸ ಇಲ್ಲದೆ, ಇನ್ನೊಬ್ಬರ ವ್ಯಾಪಾರಕ್ಕೆ ಸ್ಟೇ ಹಾಕುವುದೇ ಕೆಲಸ ಆಗಿಬಿಟ್ಟಿದೆಯಾ? ಎಂದು ಜನ ಕೇಳುತ್ತಿದ್ದಾರೆ.
ಉದ್ಯಮಿಗಳಿಗೆ ಭಯಮೂಡಿಸುವ ಕೆಲಸ!
ಇದು ಕೇವಲ ಒಬ್ಬ ವ್ಯಕ್ತಿಯ ಸಮಸ್ಯೆ ಅಲ್ಲ. ಇದು ಸಾರ್ವಜನಿಕರಿಗೆ ಹಾಗೂ ಕೆಲವು ಉದ್ಯಮಿಗಳಿಗೆ ಭಯ ಮೂಡಿಸುವಂತಹ ಕೆಲಸ ನಡೆಯುತ್ತಿದೆ.
ಇವತ್ತು ಒಬ್ಬನಿಗೆ ಆದದ್ದು, ನಾಳೆ ಇನ್ನೊಬ್ಬನಿಗೆ ಆಗಬಹುದು. ಈ ಭಯದಿಂದಾಗಿ ಅನೇಕ ಉದ್ಯೋಗಿಗಳು, ವ್ಯಾಪಾರಿಗಳು ವ್ಯಾಪಾರ ಮಾಡಲಿಕ್ಕೆ ಭಯ ಪಡುತ್ತಾರೆ. ಹೊಸ ಉದ್ಯಮ ಶುರು ಮಾಡಲು ಹಿಂಜರಿಯುತ್ತಾರೆ.
ಜಿಲ್ಲೆಯಲ್ಲಿ ಉದ್ಯಮ ಬೆಳೆಯಬೇಕಾದರೆ, ಮೊದಲು ವ್ಯಾಪಾರಿಗಳಿಗೆ ಸುರಕ್ಷತೆ ಸಿಗಬೇಕು. ಭಯವಿಲ್ಲದ ವಾತಾವರಣ ಸೃಷ್ಟಿಯಾಗಬೇಕು.
ಕಡಿವಾಣ ಹಾಕಬೇಕು!
ಈ ರೀತಿಯ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಇದಕ್ಕೆ ಸಂಬಂಧಪಟ್ಟ ಪೊಲೀಸ್ ಇಲಾಖೆ ಮತ್ತು ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸುಳ್ಳು ದೂರು ಕೊಟ್ಟು, ಸುಳ್ಳು ಸ್ಟೇ ತಂದು, ಜನರನ್ನು ಹೆದರಿಸುವವರ ವಿರುದ್ಧ ಕಠಿಣ ಕ್ರಮ ಆಗಬೇಕು.
ನಿಜವಾದ ಸಮಸ್ಯೆ ಇರುವವರಿಗೆ ನ್ಯಾಯ ಸಿಗಬೇಕು, ಆದರೆ ನ್ಯಾಯದ ಹೆಸರಲ್ಲಿ ಇನ್ನೊಬ್ಬರನ್ನು ಹೆದರಿಸಿ ವ್ಯಾಪಾರಕ್ಕೆ ಅಡ್ಡಿ ಮಾಡುವವರಿಗೆ ಕಾನೂನು ಪಾಠ ಕಲಿಸಬೇಕು.
ಮಾಧ್ಯಮದ ಮೂಲಕ ಮನವಿ!
ಇದಕ್ಕೆ ಸಂಬಂಧಪಟ್ಟ ಪೊಲೀಸ್ ಇಲಾಖೆ ಮತ್ತು ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾಧ್ಯಮದ ಮೂಲಕ ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಶಾಂತಿಯ ಜಿಲ್ಲೆ, ವ್ಯಾಪಾರದ ಜಿಲ್ಲೆ, ಉದ್ಯಮದ ಜಿಲ್ಲೆ. ಇಲ್ಲಿ ಇಂತಹ ಭಯದ ವಾತಾವರಣ ಇರಬಾರದು. ಪ್ರಾಮಾಣಿಕ ವ್ಯಾಪಾರಿಗೆ ರಕ್ಷಣೆ ಸಿಗಬೇಕು, ಮೋಸ ಮಾಡುವವರಿಗೆ ಶಿಕ್ಷೆ ಆಗಬೇಕು.
ಪೊಲೀಸರು ಮತ್ತು ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಜನರ ಒತ್ತಾಯವಾಗಿದೆ.
ನ್ಯಾಯ ಬೇಕು, ಭಯ ಬೇಡ!
ವ್ಯಾಪಾರ ಬೆಳೆಯಬೇಕು, ದಕ್ಷಿಣ ಕನ್ನಡ ಬೆಳೆಯಬೇಕು!
ಸಾರ್ವಜನಿಕರು ಹಾಗೂ ಮಂಗಳೂರು






