November 29, 2026
28-11-2026AKFLIGHT

ರಿಯಾದ್‌: ಸೌದಿ ಅರೇಬಿಯಾದ ಜೆದ್ದಾ ಮತ್ತು ಮದೀನಾಗೆ ವಿಮಾನಯಾನವನ್ನು ಇಂಡಿಗೋ ಸಂಸ್ಥೆ ಪುನರಾರಂಭಿಸಿದೆ. ಇದರ ನಡುವೆ ರಿಯಾದ್ – ದಮ್ಮಾಮ್‌ಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಸೇವೆ ಡಿ.7ರ ವರೆಗೆ ಸ್ಥಗಿತವಾಗಿರಲಿದೆ.

ಈ ಬಗ್ಗೆ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿರುವ ವಿಮಾನಯಾನ ಸಂಸ್ಥೆ, ಜಿದ್ದಾ ಮತ್ತು ಮದೀನಾಗೆ ಆಯ್ದ ಸೇವೆಗಳನ್ನು ಪುನಃಸ್ಥಾಪಿಸಲು ನಿರ್ಧರಿಸಲಾಗಿದೆ. ಆದರೆ ರಿಯಾದ್ ಮತ್ತು ದಮ್ಮಾಮ್‌ಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದನ್ನು ಮುಂದುವರಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದೆ.

ಬುಕಿಂಗ್ ಮಾಡಿರುವ ಪ್ರಯಾಣಿಕರಿಗೆ ಅಗತ್ಯ ಮಾಹಿತಿ ನೀಡಲಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ನಲ್ಲಿ ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸುವಂತೆ ಸಂಸ್ಥೆ ಗ್ರಾಹಕರಿಗೆ ಸೂಚಿಸಿದೆ.
ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ವಿಮಾನಯಾನದ ಅಡಚಣೆಯ ಸಮಯದಲ್ಲಿ ಗ್ರಾಹಕರ ಸಂಯಮ ಮತ್ತು ಸಹಕಾರಕ್ಕಾಗಿ ನಾವು ಧನ್ಯವಾದ ಅರ್ಪಿಸುತ್ತೇವೆ ಎಂದು ಸಂಸ್ಥೆ ಹೇಳಿದೆ.

About The Author

Leave a Reply