ಕಾರ್ಕಳ ರೇಪ್ ಕೇಸ್: ಸಂತ್ರಸ್ತೆ ರಕ್ತದಲ್ಲಿ ಮಾದಕವಸ್ತು ಅಂಶ ‘ಪಾಸಿಟಿವ್’

ಡುಪಿ : ಇಡಿ ರಾಜ್ಯವೇ ಬೆಚ್ಚಿ ಬೀಳಿಸುವಂತಹ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡದ್ದಿತ್ತು. ಇದೀಗಅತ್ಯಾಚಾರಕ್ಕೊಳಗಾಗಿರುವ ಸಂತ್ರಸ್ತ ಯುವತಿಯು ಘಟನೆ ವೇಳೆ ಮಾದಕ ವಸ್ತು ಸೇವಿಸಿರುವುದು ರಕ್ತ ಪರೀಕ್ಷೆಯಿಂದ ದೃಢಪಟ್ಟಿದೆ. ಆದರೆ ಪ್ರಕರಣದಲ್ಲಿ ಬಂಧಿತ ಇಬ್ಬರು ಆರೋಪಿಗಳಾದ ಅಲ್ತಾಫ್ ಹಾಗೂ ಕ್ಷೇವಿಯರ್ ರಿಚರ್ಡ್ ರಕ್ತ ಪರೀಕ್ಷೆ ವರದಿ ನೆಗೆಟಿವ್‌ ಬಂದಿದೆ.

 

ಮೂರು ತಿಂಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ಹಿಂದೂ ಯುವತಿಯನ್ನು ಭೇಟಿ ನೆಪದಲ್ಲಿ ಕರೆಸಿ ನಂತರ ಅತ್ಯಾಚಾರ ಎಸಗಿದ ಪ್ರಕರಣ ಶುಕ್ರವಾರ ಕಾರ್ಕಳದಲ್ಲಿ ನಡೆದಿತ್ತು. ಬಿಯರ್‌ನಲ್ಲಿ ಮಾದಕ ವಸ್ತು ಬೆರೆಸಿ ಯುವತಿಗೆ ಕುಡಿಸಿ ಅತ್ಯಾಚಾರ ಮಾಡಿದ ಆರೋಪ ಕೇಳಿಬಂದಿತ್ತು.

ಅದರಂತೆ ಆರೋಪಿ ಅಲ್ತಾಫ್ ಹಾಗೂ ಕ್ಷೇವಿಯರ್ ಎಂಬಿಬ್ಬರನ್ನು ಬಂಧಿಸಲಾಗಿತ್ತು. ಆಗ ಕಾರಿನಲ್ಲಿದ್ದ ಒಂದು ಪುಡಿಯನ್ನು ತೋರಿಸಿ, ಅದನ್ನು ಹುಡುಗಿ ಸೇವಿಸಿದ್ದಾಗಿ ಅಲ್ತಾಫ್ ತಿಳಿಸಿದ್ದ. ಅದರಂತೆ ಆ ಪುಡಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಅಲ್ಲಿಂದ ಇನ್ನಷ್ಟೇ ಮಾಹಿತಿ ಬಹಿರಂಗವಾಗಬೇಕಿದೆ.

ಪ್ರಕರಣದಲ್ಲಿ ಡ್ರಗ್ ಎಲ್ಲಿಂದ ಬಂದಿದೆ ಎಂಬ ಕುರಿತು ಪೂರ್ಣ ತನಿಖೆ ಮಾಡಿ ಆದಷ್ಟು ಬೇಗ ಈ ಪ್ರಕರಣ ಭೇದಿಸಲಾಗುವುದು. ಸಂತ್ರಸ್ತೆ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ಬಾಕಿ ಇದ್ದು, ವೈದ್ಯರು ಮೆಡಿಕಲ್ ಆಗಿ ಫಿಟ್ ಎಂದು ಘೋಷಿಸಿದ ಬಳಿಕ ಕೋರ್ಟ್ ಮುಂದೆ ಹಾಜರುಪಡಿಸಿ, ಶೀಘ್ರ ಈ ಪ್ರಕರಣದ ತನಿಖೆಯನ್ನು ಮುಕ್ತಾಯ ಗೊಳಿಸಲಾಗುವುದು ಎಂದು ಉಡುಪಿ ಜಿಲ್ಲಾ ಎಸ್ಪಿ ಅರುಣ್‌ ಕುಮಾರ್‌ತಿಳಿಸಿದ್ದಾರೆ.

Leave a Reply