ಬೆಂಗಳೂರು : ಶಾಸಕರ ಹೆಸರಲ್ಲಿ ನಕಲಿ ಸಹಿ ಲೆಟರ್ ಹೆಡ್ ಸೃಷ್ಟಿಸಿ ಕೆಲಸ ಪಡೆದ ಆರೋಪದ ಮೇಲೆ ವಿಧಾನಸೌಧ ಪೊಲೀಸ್ ಠಾಣೆಯಿಂದ ಇಬ್ಬರು ಆರೋಪಿಗಳ ಬಂಧನವಾಗಿದ್ದು, ಬಂಧಿತರನ್ನು ರಾಮನಗರದ ಸ್ವಾಮಿ (35) ಅಂಜನ್ ಕುಮಾರ್ (28) ಎಂದು ತಿಳಿದುಬಂದಿದೆ.
ಆರೋಪಿ ಸ್ವಾಮಿ ಪತ್ನಿ ವಿನುತಾಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವಾಮಿ ಎನ್ನುವ ವ್ಯಕ್ತಿ ಕೆಲಸ ಮಾಡಿಕೊಂಡಿದ್ದ. ಕೆಲಸ ತೊರೆದು ರಾಜಕಾರಣಿಗಳ ಒಡನಾಟವನ್ನು ಬೆಳೆಸಿಕೊಂಡಿದ್ದ. ಶಾಸಕ ಶಾಮನೂರು ಸಹಿ ನಕಲಿ ಮಾಡಿ ಲೆಟರ್ ಹೆಡ್ ಒಂದನ್ನು ಸೃಷ್ಟಿಸಿದ್ದ. ಬಳಿಕ ವಿಧಾನಸಭಾ ಸಚಿವಾಲಯಕ್ಕೆ ಪತ್ರ ಬರೆದು ವಿನುತಾಗೆ ಶಾಸಕರ ಪಿಎ ಕೆಲಸ ಕೊಡಿಸಿದ್ದ.
ಆರೋಪಿ ಸ್ವಾಮಿ ವಿನುತಾಗೆ ಶಾಸಕ ಶಿವಶಂಕರಪ್ಪ ಆಪ್ತ ಸಹಾಯಕ್ಕಾಗಿ ನೇಮಿಸಲು ಶಿಫಾರಸ್ಸು ಮಾಡಿದ್ದ. ನಕಲಿ ಲೆಟರ್ ಹೆಡ್ ನಂಬಿ ವಿನುತಾಗೆ ಸಚಿವಾಲಯ ಕೆಲಸ ನೀಡಿತ್ತು. 2023ರ ಮೇನಲ್ಲಿ ವಿಧಾನಸಭೆ ಸಚಿವಾಲಯ ಸಿಬ್ಬಂದಿ ಕೆಲಸ ನೀಡಿತ್ತು.ಕೆಲಸಕ್ಕೆ ಬಾರದೆ ಪ್ರತಿ ತಿಂಗಳು 3000 ಸಂಬಳ ಪಡೆಯುತ್ತಿದ್ದ ವಿನುತ, ಗರ್ಭಿಣಿಯಾದ ಬಳಿಕ ಕೆಲಸದಿಂದ ಬಿಡುಗಡೆಗೊಳಿಸಲು ವಿನುತಾ ಪತ್ರ ಬರೆದಿದ್ದಾರೆ.
ಬಳಿಕ ಅನುಮಾನ ಗೊಂಡು ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ವಂಚನೆ ಕುರಿತು ಅಧಿಕಾರಿಗಳು ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ವಿಚಾರಣೆ ಬಳಿಕ ಶಾಸಕ ಎಸ್ ರಘು ಹೆಸರಿನಲ್ಲೂ ವಂಚನೆ ಬಳಕೆಗೆ ಬಂದಿದೆ. ಶಾಸಕ ರಘು ಹೆಸರಿನಲ್ಲೂ ಕೂಡ ನಕಲಿ ಲೆಟರ್ ಹೆಡ್ ಸೃಷ್ಟಿಸಿ ಅಂಜನ್ ಕುಮಾರ್ ಬಾತನಿಗೆ ಕೆಲಸ ಕೊಡಿಸಿದ್ದ ಎನ್ನಲಾಗುತ್ತಿದೆ.