ಬೆಳಗಾವಿ: ಅಣ್ಣನ ಹೆಸರಿಗೆ ಮಾಡಿದ್ದ 50 ಲಕ್ಷ ಮೊತ್ತದ ಜೀವ ವಿಮಾ ಪಾಲಿಸಿಯ ಹಣ ಪಡೆಯಲು ತಮ್ಮ ತನ್ನ ಇತರ ಸಹಚರರೊಂದಿಗೆ ಸೇರಿಕೊಂಡು ಸಹೋದರನನ್ನೇ ಹತ್ಯೆಗೈದಿರುವ ಘಟನೆ ಮೂಡಲಗಿ ತಾಲೂಕಿನ ಕಲ್ಲೋಳ ಗ್ರಾಮದಲ್ಲಿ ನಡೆದಿದ್ದು ಇದೀಗ ಪೊಲೀಸರ ತನಿಖೆಯಲ್ಲಿ ವಿಚಾರ ಬೆಳಕಿಗೆ ಬಂದಿದೆ.
ಕಲ್ಲೋಳಿಯ ಹನುಮಂತ ಗೋಪಾಲ ತಳವಾರ(35) ಕೊಲೆಯಾಗಿರುವ ವ್ಯಕ್ತಿ. ತಮ್ಮ ಬಸವರಾಜ ತಳವಾರ ಹಾಗೂ ಆತನ ಸ್ನೇಹಿತರಾದ ಬಾಪು ಶೇಖ್, ಈರಪ್ಪ ಹಡಗಿನಾಳ ಮತ್ತು ಸಚಿನ ಕಂಟೆನ್ನವರ ಬಂಧಿತ ಆರೋಪಿಗಳು.