ಮನೆಯ ಮಹಡಿಯಿಂದ ಬಿದ್ದು ಬಿಕಾಂ ವಿದ್ಯಾರ್ಥಿ ಸಾವು

ಮಣಿಪಾಲ: ಮನೆಯ ಮಹಡಿಯ ಮೇಲಿಂದ ಕೆಳಕ್ಕೆ ಬಿದ್ದು ಬಿಕಾಂ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಸಂಭವಿಸಿದೆ. ಬಡಗುಬೆಟ್ಟು ಗ್ರಾಮದ ಕಾರ್ತಿಕ್‌ (21) ಮೃತ ವಿದ್ತಾರ್ಥಿ. ಇವರು ಮಣಿಪಾಲದಲ್ಲಿ ಮೂರನೇ ವರ್ಷದ ಬಿಕಾಂ ವ್ಯಾಸಾಂಗ ಮಾಡಿಕೊಂಡಿದ್ದರು. ಓದು ಮುಗಿದ ಬಳಿಕ ಹಾಡು ಕೇಳುವ ಅಬ್ಯಾಸ ಇದ್ದು ಮನೆಯಲ್ಲಿ ಊಟ ಮುಗಿಸಿ ಮೊಬೈಲ್‌ ಹಿಡಿದುಕೊಂಡು ಮಹಡಿಗೆ ಹೋಗಿದ್ದರು. ಹಾಡು ಕೇಳುತ್ತಾ ಕುಳಿತವರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತೀವ್ರ ಗಾಯಗೊಂಡಿದ್ದರು.ಇವರನ್ನು ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply