ನೆಲ್ಯಾಡಿ: ಬೈಕ್ – ಕಾರು ನಡುವೆ ಅಪಘಾತ; ಸವಾರ ಸ್ಥಳದಲ್ಲಿಯೇ ಸಾವು

ನೆಲ್ಯಾಡಿ: ಬೈಕ್‌ ಹಾಗೂ ಮಹೀಂದ್ರಾ ಎಕ್ಸ್‌ಯುವಿ ಕಾರು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಸಮೀಪದ ನೇಲ್ಯಡ್ಕ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ. ಮೃತ ಸವಾರನನ್ನು‌ ಬೆಳ್ತಂಗಡಿ ತಾಲೂಕು ರೆಖ್ಯ ಗ್ರಾಮದ ನಾಳಾಲು ನಿವಾಸಿ ರವಿ ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಮಹೀಂದ್ರಾ ಎಕ್ಸ್’ಯುವಿ ಕಾರು ಹಾಗೂ ಬೈಕ್ ನಡುವೆ ನೇಲ್ಯಡ್ಕ ಸಮೀಪ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Leave a Reply