
ಪುತ್ತೂರು: ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಮನೆಗೆ ಪೊಲೀಸರು ದಾಳಿ ನಡೆಸಿದ ಘಟನೆ ಇಲ್ಲಿನ ಸಾಮೆತ್ತಡ್ಕದಲ್ಲಿ ನಡೆದಿದೆ.

ದಾಳಿ ವೇಳೆ ಯುವತಿ ಮತ್ತು ಪುರುಷನನ್ನು ಅಲ್ಲಿಂದ ತಪ್ಪಿಸಲು ಮನೆ ಮಾಲಕ ಸಹಾಯ ಮಾಡಿದ್ದಾರೆ. ಆದರೆ ಬೆನ್ನತ್ತಿದ್ದ ಪೊಲೀಸರು ಯುವಕನನ್ನು ಸೆರೆಹಿಡಿದಿದ್ದಾರೆ.

ಸುಳ್ಯ ಮೂಲದ ಪುರುಷ ಮತ್ತು ಅವರಿಗೆ ಮನೆ ನೀಡಿದ ವಿಲೈಡ್ ಎಂಬವರನ್ನು ವಶಕ್ಕೆ ಪಡೆದು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
