“ನನ್ನ ಸಮಾಧಿಯನ್ನ ನಾನೇ ಅಗೆಯುತ್ತೇನೆ” : ಹಮಾಸ್ ಸುರಂಗದೊಳಗೆ ಇಸ್ರೇಲಿ ಒತ್ತೆಯಾಳುವಿನ ಆಕ್ರಂದನ

ನವದೆಹಲಿ : ಪ್ಯಾಲೆಸ್ಟೀನಿಯನ್ ಗುಂಪು ಹಮಾಸ್ ಬಿಡುಗಡೆ ಮಾಡಿದ ವೀಡಿಯೋದಲ್ಲಿ, ಇಸ್ರೇಲಿ ಒತ್ತೆಯಾಳು ಕೃಶವಾಗಿ ಕಾಣುತ್ತಿರುವುದನ್ನ ತೋರಿಸುತ್ತದೆ, ಭೂಗತ ಸುರಂಗದಲ್ಲಿ ತನ್ನದೇ ಆದ ಸಮಾಧಿ ಎಂದು ಆತ ವಿವರಿಸುವದನ್ನ ನೋಡಬಹುದು.

48 ಗಂಟೆಗಳ ಒಳಗೆ ಪ್ಯಾಲೆಸ್ಟೀನಿಯನ್ ಗುಂಪು ಪ್ರಸಾರ ಮಾಡಿದ 24 ವರ್ಷದ ಎವ್ಯಾಟರ್ ಡೇವಿಡ್ ಅವರ ಎರಡನೇ ವೀಡಿಯೊ ಇದು. ದೃಶ್ಯಗಳಲ್ಲಿ, ಅಸ್ಥಿಪಂಜರದಂತೆ ಕಾಣುವ ಮತ್ತು ಮಾತನಾಡಲು ಸಾಧ್ಯವಾಗದ ಡೇವಿಡ್, ಸೀಮಿತ ಭೂಗತ ಸುರಂಗದಂತೆ ಕಾಣುವ ಸ್ಥಳದಲ್ಲಿ ಸಲಿಕೆಯನ್ನ ಬಳಸುತ್ತಿರುವುದನ್ನ ಕಾಣಬಹುದು. ಆತ ನಿಧಾನವಾಗಿ ಮತ್ತು ಮಂದವಾಗಿ ಕ್ಯಾಮೆರಾಗೆ ಮಾತನಾಡುತ್ತಾ ತನ್ನ ಕಷ್ಟವನ್ನ ವಿವರಿಸುತ್ತಾನೆ.

“ನಾನು ಈಗ ಆಗೆಯುತ್ತಿರುವುದು ನನ್ನ ಸ್ವಂತ ಸಮಾಧಿಯನ್ನ” ಎಂದು ಡೇವಿಡ್ ಹೀಬ್ರೂ ಭಾಷೆಯಲ್ಲಿ ಹೇಳುತ್ತಾರೆ. “ಪ್ರತಿದಿನ ನನ್ನ ದೇಹವು ದುರ್ಬಲವಾಗುತ್ತಿದೆ. ನಾನು ನೇರವಾಗಿ ನನ್ನ ಸಮಾಧಿಗೆ ನಡೆಯುತ್ತಿದ್ದೇನೆ. ಅಲ್ಲಿ ನಾನು ಸಮಾಧಿ ಮಾಡಲಿರುವ ಗುಂಡಿ ಇದೆ. ಬಿಡುಗಡೆಯಾಗಲು ಮತ್ತು ನನ್ನ ಕುಟುಂಬದೊಂದಿಗೆ ನನ್ನ ಹಾಸಿಗೆಯಲ್ಲಿ ಮಲಗಲು ಸಾಧ್ಯವಾಗುವ ಸಮಯ ಮೀರುತ್ತಿದೆ” ಎಂದಿದೆ.

Leave a Reply