ವಿಟ್ಲ: ಶಿಶು ಅಭಿವೃದ್ದಿ ಯೋಜನಾ ಕೇಂದ್ರ ಕಛೇರಿಗೆ ತಾತ್ಕಲಿಕ ವಿಶ್ರಾಂತಿ ಕೊಠಡಿ ಕೊಡುಗೆ

ದಿನಾಂಕ: 04-08-2025 ರಂದು ವಿಟ್ಲ ಶಿಶು ಅಭಿವೃದ್ಧಿ ಯೋಜನಾ ಕಛೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವಿಟ್ಲ ಹಾಗೂ ಜೆ.ಐ.ಎಚ್ ಸಮಾಜಸೇವಾ ಘಟಕ ಮಂಗಳೂರು ಇವರ ಕೊಡುಗೆಯ ಪ್ರಯುಕ್ತ “ಸ್ತನ್ಯಪಾನ ಸಪ್ತಾಹ ಹಾಗೂ ಮಹಿಳಾ ವಿಶ್ರಾಂತಿ ಕೊಠಡಿ”ಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದಲ್ಲಿ ಜೆ.ಐ.ಎಚ್ ಸಮಾಜಸೇವಾ ಘಟಕದ ಮಂಗಳೂರು ಇದರ ವತಿಯಿಂದ ಕೊಡುಗೆಯಾಗಿ ಸಿಗಲು ಕಾರಣಕರ್ತರಾದ ಸಾಮಾಜಿಕ ಕಾರ್ಯಕರ್ತರಾದ ಶ್ರೀಯುತ ಹಸೈನಾರ್ ತಾಳೀತ್ತನೂಜಿ ,ಕೆ ಅಸ್ಮ ಹಸೈನಾರ್ ಉಪಾಧ್ಯಕ್ಷರು ಕೊಳ್ನಾಡು ಗ್ರಾಮ ಪಂಚಾಯತ್,ವಿಟ್ಲಪಡ್ನೂರು ಗ್ರಾ.ಪಂಚಾಯತ್ ಸದಸ್ಯರೂ,ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ ಮಾಜಿ ಅದ್ಯಕ್ಷರಾದ ಸಂದೇಶ್ ಶೆಟ್ಟಿ ಬಿಕ್ನಾಜೆ,ಸೋಮಶೇಖರ ಗೌಡ ತಾಳಿತ್ತನೂಜಿ ಪ್ರಗತಿಪರ ಕೃಷಿಕರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಮುಮ್ತಾಝ್ ಹೆಚ್ ಮತ್ತು ವಿಟ್ಲ ಸಮುದಾಯ ಆರೋಗ್ಯ ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಶ್ರೀಮತಿ ಇಂದಿರಾ , ಶ್ರೀಮತಿ ಶಾರದಾ ಸಹಾಯಕಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಟ್ಲ, ಇವರು ಉಪಸ್ಥಿತರಿದ್ದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರು “ಮಹಿಳಾ ವಿಶ್ರಾಂತಿ ಕೊಠಡಿಯ” ಅಗತ್ಯತೆಯ ಬಗ್ಗೆ ಮತ್ತು ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಬಗ್ಗೆ ಸವಿವರವಾದ ಮಾಹಿತಿಯನ್ನು ಸಭೆಗೆ ನೀಡಿದರು. ಸಮುದಾಯ ಆರೋಗ್ಯ ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಶ್ರೀಮತಿ ಇಂದಿರಾ ಇವರು ಸ್ತನ್ಯಪಾನದ ಮಹತ್ವ ಹಾಗೂ ಅದರಿಂದಾಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.

 

ಶ್ರೀಮತಿ ರೇಣುಕಾ ಮೇಲ್ವಿಚಾರಕಿ ಇವರು ಕಾರ್ಯಕ್ರಮಕ್ಕೆ ಸ್ವಾಗತವನ್ನು ಕೋರಿ, ರೂಪಕಲಾ ಹಿರಿಯ ಮೇಲ್ವಿಚಾರಕಿ ಕಾರ್ಯಕ್ರಮಕ್ಕೆ ಧನ್ಯವಾದವನ್ನು ಸಮರ್ಪಿಸಿದರು, ಶ್ರೀಮತಿ ಶಾರದಾ ಕೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಅಂಗನವಾಡಿ ಮೇಲ್ವಿಚಾರಕರು, ಕಛೇರಿ ಸಿಬ್ಬಂದಿಗಳು , ಮಕ್ಕಳ ಪೋಷಕರು, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸದಸ್ಯರು ಮತ್ತಿತ್ತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Reply