ಬೆಂಜನಪದವು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ 2023-24 ರ ಶೈಕ್ಷಣಿಕ ಸಾಲಿನ SSLC ಪಬ್ಲಿಕ್ ಪರೀಕ್ಷೆಯಲ್ಲಿ 562 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಮಲ್ಲೂರು ಗ್ರಾಮಕ್ಕೆ ಕೀರ್ತಿಯನ್ನು ತಂದಿರುವ ಶರೀಫ್ ಪಾದೆ ಹಾಗೂ ಜೊಹರಾ ದಂಪತಿಯ ಪುತ್ರಿ ಶಿಫಾನ ಎಂಬ ವಿದ್ಯಾರ್ಥಿನಿಗೆ ಎಸ್ಡಿಪಿಐ ಮಲ್ಲೂರು ಗ್ರಾಮ ಸಮಿತಿ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಇಲ್ಯಾಸ್ ಪಾದೆ, ಎಸ್ಡಿಪಿಐ ಮಲ್ಲೂರು ಗ್ರಾಮ ಸಮಿತಿ ಉಪಾಧ್ಯಕ್ಷರಾದ ಸುಫ್ಯಾನ್ ಮಲ್ಲೂರು, ವಾರ್ಡ್ 1 ರ ಅಧ್ಯಕ್ಷರಾದ ಯಾಸೀನ್ ಬದ್ರಿಯಾನಗರ ಹಾಗೂ ವಾರ್ಡ್ 2 ರ ಕಾರ್ಯದರ್ಶಿ ಇರ್ಷಾದ್ ಮಲ್ಲೂರು ಉಪಸ್ಥಿತರಿದ್ದರು.