
ಮಂಗಳೂರು: ಸ್ಥಳ ಮಹಜರು ವೇಳೆ ಪರಾರಿಗೆ ಯತ್ನಿಸಿದ ಚಡ್ಡಿ ಗ್ಯಾಂಗ್ ತಂಡದ ಆರೋಪಿಗಳ ಮೇಲೆ ಫೈರಿಂಗ್ ಮಾಡಿದ ಪೊಲೀಸರನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಸನ್ಮಾನಿಸಿದ್ದಾರೆ.



ಇತ್ತೀಚೆಗೆ ಮಂಗಳೂರು ನಗರದಲ್ಲಿ ದರೋಡೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದ ಚಡ್ಡಿಗ್ಯಾಂಗನ್ನು ನಗರ ಪೊಲೀಸರು ಘಟನೆ ನಡೆದ ಐದೇ ಘಂಟೆಯಲ್ಲಿ ಬಂಧಿಸಿದ್ದರು. ಪ್ರಕರಣ ಸಂಬಂಧ ಸ್ಥಳ ಮಹಜರು ಮಾಡುವ ವೇಳೆ ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳ ಮೇಲೆ ಫೈರಿಂಗ್ ಕೂಡಾ ನಡೆದಿತ್ತು. ಇದೀಗ ಪೈರಿಂಗ್ ಮಾಡಿದ ಮಂಗಳೂರು ಉರ್ವ ಪೊಲೀಸರ ತಂಡದ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಐವನ್ ಡಿಸೋಜ ಈ ಪೊಲೀಸ್ ತಂಡವನ್ನು ಗೌರವಿಸಿ ಸನ್ಮಾನ ಮಾಡಿದ್ದಾರೆ. ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿತ್ತಿದ್ದ ವೇಳೆ ಆತನ ಮೇಲೆ ಫೈರಿಂಗ್ ಮಾಡಿದ ಪಿಎಸ್ಐ ಭಾರತಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.