ಮಂಗಳೂರು: ಮೀನುಗಾರಿಕಾ ಬೋಟ್ ಗೆ ಆಕಸ್ಮಿಕ ಬೆಂಕಿ

ಮಂಗಳೂರು: ಮೀನುಗಾರಿಕಾ ಬೋಟ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ದಕ್ಕೆ ಬಂದರು ಬಳಿ ಆ.10ರ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ.

ಸುಮಾರು 5 ಗಂಟೆಗೆ ವೇಳೆಗೆ ಈ ಬೋಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಎಚ್ಚೆತ್ತುಕೊಂಡು ಇತರೆ ಬೋಟ್ ಗಳನ್ನು ದೂರಕ್ಕೆ ಎಳೆದು ಬೆಂಕಿ‌ ಹರಡುವುದನ್ನು ತಪ್ಪಿಸಲಾಗಿದೆ.

ಪಾಂಡೇಶ್ವರ ಅಗ್ನಿಶಾಮಕ‌‌ ದಳ ಹಾಗೂ ಕದ್ರಿ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.

Leave a Reply