
ಬೆಳ್ತಂಗಡಿ: 2024-25ನೇ ಸಾಲಿನ ಕರ್ನಾಟಕ ರಾಜ್ಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅತಿ ಹೆಚ್ಚು ಅಂಕಗಳಿಸಿ, ರಾಜ್ಯಕ್ಕೆ 2 ನೇ ರ‌್ಯಾಂಕ್ ಗಳಿಸಿರುವ ಬೆಳ್ತಂಗಡಿಯ SDM ಆಂಗ್ಲ ಮಾಧ್ಯಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ಚಿನ್ಮಯ್ ಜಿ.ಕೆ. ಯನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ. ಕ ಜಿಲ್ಲಾ ಸಮಿತಿ ವತಿಯಿಂದ ಬೆಳ್ತಂಗಡಿಯ ವಿದ್ಯಾರ್ಥಿಯ ಮನೆಗೆ ತೆರಳಿ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ನೇತೃತ್ವದಲ್ಲಿ ವಿದ್ಯಾರ್ಥಿಗೆ ಶಾಲು ಹೊದಿಸಿ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು. ಚಿನ್ಮಯನ ತಂದೆ ಬೆಳ್ತಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಗಣೇಶ್ ಭಟ್ ರವರು ಉಪಸ್ಥಿತರಿದ್ದು ಮಗನ ಸಾಧನೆ ಮತ್ತು ಅದಕ್ಕೆ ಬೆಂಬಲವಾಗಿ ನಿಂತ ಶಾಲೆಯ ಶಿಕ್ಷಕರು ಮತ್ತು ಪೋಷಕರ ಬಗ್ಗೆ SDPI ನಾಯಕರು ಅಭಿನಂದನೆ ಸಲ್ಲಿಸಿ ಶಾಲೆಗೆ, ನಾಡಿಗೆ ಗೌರವ ತಂದ ಚಿನ್ಮಯನ ಭವಿಷ್ಯ ಉಜ್ವಲ ವಾಗಿ, ಮುಂದಿನ ವಿದ್ಯಾಭ್ಯಾಸದಲ್ಲಿ ಇದೇ ರೀತಿಯ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ



ಈ ಸಂದರ್ಭದಲ್ಲಿ ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಧ್ಯಕ್ಷರಾದ ನವಾಝ್ ಕಟ್ಟೆ, ಮುಖಂಡರಾದ ರಶೀದ್ ಬೆಳ್ತಂಗಡಿ, ಅಶ್ರಫ್ ಕಟ್ಟೆ, ಉಪಸ್ಥಿತರಿದ್ದರು