
ಮಂಗಳೂರು: ದ್ವಿಚಕ್ರ ವಾಹನ ಸವಾರರೊಬ್ಬರ ಮೇಲೆ ಕಾರು ಹರಿದು ಮೃತಪಟ್ಟ ಘಟನೆ ಕುಂಟಿಕಾನದಲ್ಲಿ ನಡೆದಿದೆ.



ಕಾವೂರು ನಿವಾಸಿ ಕೌಶಿಕ್ (21) ಮೃತಪಟ್ಟ ದುರ್ದೈವಿ. ನಗರದ ಕುಂಟಿಕಾನದ ಎ.ಜೆ. ಆಸ್ಪತ್ರೆಯಿಂದ ಹೊರಬರುತ್ತಿದ್ದ ದ್ವಿಚಕ್ರ ವಾಹನ ರಿಕ್ಷಾವೊಂದಕ್ಕೆ ತಗುಲಿ ಅಡ್ಡಬಿದ್ದಿದೆ. ಈ ವೇಳೆ ಸವಾರ ನೆಲಕ್ಕೆ ಬಿದ್ದಾಗ ಅವರ ಮೇಲೆ ಏಕಾಏಕಿ ಕಾರು ಹರಿದಿದೆ. ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.