Visitors have accessed this post 209 times.
ಮುಲ್ಕಿ : ನಿಡ್ಡೋಡಿ ಶುಂಠಿಲಪದವಿನಿಂದ ಕಟೀಲು ಕಡೆಗೆ ಬರುತ್ತಿದ್ದ ಲಾರಿಯೊಂದು ರೆಸಾರ್ಟ್ ಬಳಿ ನಿಯಂತ್ರಣ ತಪ್ಪಿ, ಭಾರಿ ಗಾತ್ರದ ಹೊಂಡಕ್ಕೆ ಬಿದ್ದು ಚಾಲಕ ಮೃತಪಟ್ಟಿದ್ದಾರೆ. ಮೃತ ಚಾಲಕನನ್ನು ಮೂಡಬಿದ್ರೆ ಪಾಲಡ್ಕ ನಿವಾಸಿ ವಿಶ್ವನಾಥ ನಾಯಕ್(45) ಎಂದು ಗುರುತಿಸಲಾಗಿದೆ. ಮೃತ ಚಾಲಕ ಶುಂಠಿಲ ಪದವು ಬಳಿಯಿಂದ ಲಾರಿಯಲ್ಲಿ ಕಲ್ಲು ಹೇರಿಕೊಂಡು ಕಟೀಲು ಕಡೆಗೆ ಬರುತ್ತಿದ್ದಾಗ ಸೌಂದರ್ಯ ರೆಸಾರ್ಟ್ ಚಡಾವು ಬಳಿ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿಸಿದ ಬಲಬದಿಗೆ ಚಲಿಸಿ, ಭಾರಿ ಗಾತ್ರದ ಹೊಂಡಕ್ಕೆ ಬಿದ್ದಿದೆ ಎನ್ನಲಾಗಿದೆ. ಈ ಸಂದರ್ಭ ಚಾಲಕ ವಿಶ್ವನಾಥ ಟಿಪ್ಪರ್ ನ ಒಳಗಡೆ ಸಿಲುಕಿಕೊಂಡು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.