ಉಡುಪಿ: ನಾಲ್ವರ ಹತ್ಯೆ ಪ್ರಕರಣ – ಕೊಲೆಯಾದ ಗಗನಸಖಿಯ ಸಹೋದ್ಯೋಗಿಯಿಂದಲೇ ಕೃತ್ಯ

ಉಡುಪಿ :  ಉಡುಪಿಯ ನೇಜಾರಿನಲ್ಲಿ ಗಗನಸಖಿ ಸೇರಿದಂತೆ ಒಂದೇ ಕುಟುಂಬದ ನಾಲ್ವರ‌ನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರವೀಣ್ ಚೌಗಲೆ (35) ಎಂಬಾತನನ್ನು ಬಂಧಿಸಿದ್ದು, ಆತನ ಬಂಧನದ ಬಳಿಕ ಕೆಲವು ಸಂಗತಿಗಳು ಬೆಳಕಿಗೆ ಬಂದಿವೆ.

ಮೂಲಗಳ ಪ್ರಕಾರ, ಪ್ರವೀಣ್ ಚೌಗಲೆ ಮತ್ತು ಹತ್ಯೆಯಾದ ಗಗನಸಖಿ ಅಯ್ನಾಜ್‌ ಅವರು ಸಹೋದ್ಯೋಗಿಗಳಾಗಿದ್ದರು ಎಂದು ತಿಳಿದು ಬಂದಿದೆ.

ಇನ್ನು ಅಯ್ನಾಜ್‌ ಮತ್ತು ಆರೋಪಿ ಪ್ರವೀಣ್ ನಡುವಿನ ಪ್ರೇಮದಿಂದ ಒಂದೇ ಕುಟುಂಬದ ನಾಲ್ವರ ಹತ್ಯೆ ನಡೆದಿದೆ ಎನ್ನಲಾಗುತ್ತಿದ್ದು ಈ ಬಗ್ಗೆ ಪೊಲೀಸರು ಎಲ್ಲಾ ರೀತಿಯ ತನಿಖೆಯನ್ನು ನಡೆಸುತ್ತಿದ್ದಾರೆ.

ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನಲ್ಲಿ ನವೆಂಬರ್ 12ರಂದು ತಾಯಿ ಹಸೀನಾ(46), ಪುತ್ರಿಯರಾದ ಅಫ್ನಾನ್ (23), ಅಯ್ನಾಜ್‌ (21) ಮತ್ತು ಪುತ್ರ ಆಸೀಮ್ (12) ನನ್ನು ಹತ್ಯೆ ಮಾಡಲಾಗಿದ್ದು, ಘಟನೆಯಲ್ಲಿ ಅಯ್ನಾಜ್‌ ಅವರ ಅಜ್ಜಿ ಹಾಜಿರಾಬಿ ಅವರು ಗಾಯಗೊಂಡಿದ್ದು ಈಗ ಚೇತರಿಸಿಕೊಂಡಿದ್ದಾರೆ.

ಎರಡು ದಿನಗಳ ಶೋಧದ ನಂತರ ಆರೋಪಿ ಪ್ರವೀಣ್ ನನ್ನು ಉಡುಪಿ ಮತ್ತು ಬೆಳಗಾವಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಬಂಧಿಸಿದ್ದಾರೆ.

ಇನ್ನು ಪ್ರವೀಣ್ ಈ ಹಿಂದೆ ಸಿಆರ್‌ಪಿಎಫ್‌ನಲ್ಲಿ ಪೊಲೀಸ್ ಆಗಿದ್ದರು ಎಂದು ವರದಿಯಾಗಿದೆ.

Leave a Reply