Visitors have accessed this post 1561 times.
ಉಡುಪಿ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನ ಕೊಲೆ ಮಾಡಿದ ಹಂತಕ ಪ್ರವೀಣ್ ಅರುಣ್ ಚೌಗಲೆಯನ್ನು ‘ಏರ್ ಇಂಡಿಯಾ ಎಕ್ಸ್‌ಪ್ರೆಸ್’ ವಿಮಾನಯಾನ ಸಂಸ್ಥೆ ಕೆಲಸದಿಂದ ತೆಗೆದು ಹಾಕಿದೆ.
ಈ ಘಟನೆಯಿಂದ ನಮಗೆ ತೀವ್ರ ದುಃಖವಾಗಿದ್ದು, ಮೃತರ ಸಂಬಂಧಿಗಳಿಗೆ ನಾವು ಬೆಂಬಲ ನೀಡಿ, ತನಿಖೆಗೆ ಎಲ್ಲ ಸಹಕಾರ ನೀಡುತ್ತೇವೆ. ಈ ಘಟನೆ ಗಮನಕ್ಕೆ ಬಂದ ತಕ್ಷಣದಿಂದಲೇ ಆತನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ’ ಎಂದು ಸಂಸ್ಥೆಯ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. ಉಡುಪಿ ಜಿಲ್ಲೆ ಮಲ್ಪೆ ಸಮೀಪದ ನೇಜಾರಿನ ತೃಪ್ತಿ ಲೇಔಟ್‌ನಲ್ಲಿ, ಸಹೋದ್ಯೋಗಿ ಅಯ್ನಾಜ್ ಹಾಗೂ ಅವರ ಕುಟುಂಬದ ಹಸೀನಾ, ಅಫ್ನಾನ್, ಅಸೀಮ್ ಅವರನ್ನು ಕೊಲೆ ಮಾಡಿದ್ದ ಆರೋಪದ ಮೇಲೆ ಪ್ರವೀಣ್ ಚೌಗಲೆಯನ್ನು ನವೆಂಬರ್ 16ರಂದು ಪೊಲೀಸರು ಬಂಧಿಸಿದ್ದಾರೆ.