
ಬೆಳ್ತಂಗಡಿ : ಮಹಿಳೆಯ ಮೊಬೈಲ್ ಫೋನ್ ಕದ್ದು ಅದರಿಂದಲೇ ಫೋನ್ ಪೇ ಮೂಲಕ ಹಣ ಲಪಟಾಯಿಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಬೆಳ್ತಂಗಡಿಯ ಕುವೆಟ್ಟು ನಿವಾಸಿ ಅಭಿದಾ ಬಾನು ನೀಡಿರುವ ದೂರಿನ ಮೇರೆಗೆ ಸಿದ್ಧಿಕ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ನ. 9 ರಂದು ಬೆಳಿಗ್ಗೆ ಮಹಿಳೆ ಮನೆಯಲ್ಲಿ ಇರದಿದ್ದ ವೇಳೆ, ಮಹಿಳೆಯ ಪರಿಚಯದ ಸಿದ್ದಿಕ್ ಎಂಬಾತನು ಮಹಿಳೆಯ ಮನೆಯಿಂದ ಅಂದಾಜು ರೂ 8000/- ಮೌಲ್ಯದ ಮೊಬೈಲನ್ನು ಕಳವು ಮಾಡಿಕೊಂಡು ಹೋಗಿದ್ದು, ಆ ಬಳಿಕ ಸದ್ರಿ ಮೊಬೈಲ್‌ನಲ್ಲಿ, ಪೋನ್ ಪೇ ಮುಖಾಂತರ ಅವರ ಖಾತೆಯಲ್ಲಿದ್ದ ರೂ 64.000/- ಹಣದ ಪೈಕಿ, ರೂ 34.000/- ರೂ ಹಣವನ್ನು ಜಾಪರ್ ಎಂಬಾತನಿಗೂ, ರೂ 25.000/- ಹಣವನ್ನು ಮಹಮ್ಮದ್ ಎಂಬಾತನಿಗೂ ಹಾಗೂ ರೂ 2000/- ಹಣವನ್ನು ಸಿರಾಜ್ ಎಂಬಾತನಿಗೂ ವರ್ಗಾವಣೆ ಮಾಡಿರುತ್ತಾರೆ.
ಅವರೆಲ್ಲರು ಮಹಿಳೆಯ ಗಂಡನ ಸ್ನೇಹಿತರಾಗಿರುವುದರಿಂದ ಮೊಬೈಲ್ ಮತ್ತು ಹಣವನ್ನು ವಾಪಸು ನೀಡಬಹುದೆಂದು ಕಾದಿದ್ದು, ಈವರೆಗೆ ವಾಪಾಸ್ ನೀಡದಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ 116/2023 ಕಲಂ; 380,411ಭಾ ದಂ ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.