Visitors have accessed this post 1397 times.
ತುಮಕೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿ ಮಾಜಿ ಸಚಿವ ಸೋಮಣ್ಣ ಬಹುತೇಕ ಖಚಿತ ಆಗಿದ್ದು, ಲೋಕಸಭಾ
ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ. ಸಿದ್ಧಗಂಗಾ
ಮಠದಲ್ಲಿ ಸೋಮಣ್ಣ ಕುಟುಂಬ ನಿರ್ಮಿಸಿರುವ ಗುರುಭವನದ ಉದ್ಘಾಟನಾ ಸಮಾರಂಭ ಡಿ.6ರಂದು
ನಡೆಯಲಿದೆ. ಇದೇ ಕಾರ್ಯಕ್ರಮದಲ್ಲಿ ಸೋಮಣ್ಣ ಅವರು ಕಾಂಗ್ರೆಸ್ ಸೇರುವ ಕುರಿತು ಘೋಷಿಸುವ
ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಸೋಮಣ್ಣ ಅವರು ಇತ್ತೀಚಿಗಷ್ಟೇ ಡಿ.6ರಂದು ದೊಡ್ಡ ನಿರ್ಧಾರ
ತೆಗೆದುಕೊಳ್ಳುವುದಾಗಿ ಹೇಳಿದ್ದರು