Visitors have accessed this post 565 times.

ಉಡುಪಿಯ ಪ್ರಸಿದ್ಧ ಬಟ್ಟೆ ಮಳಿಗೆಯಲ್ಲಿ ಮಿಸ್‌ ಫೈರಿಂಗ್‌: ಸಿಬ್ಬಂದಿಗೆ ಗಾಯ

Visitors have accessed this post 565 times.

ಉಡುಪಿ: ನಗರದ ಬನ್ನಂಜೆಯಲ್ಲಿರುವ ಜಯಲಕ್ಷ್ಮೀ ಸಿಲ್ಕ್‌ನಲ್ಲಿ ಇಂದು ಮಧ್ಯಾಹ್ನ‌ ಪಿಸ್ತೂಲ್ ನಿಂದ ಮಿಸ್‌ ಫೈರಿಂಗ್‌ ಆದ ಪರಿಣಾಮ ಸಿಬ್ಬಂದಿಯೋರ್ವರು ಗಾಯಗೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ ‌
ಮಳಿಗೆಯಲ್ಲಿ ಯಾರೋ ಬಿಟ್ಟು ಹೋಗಿದ್ದ ಪಿಸ್ತೂಲ್ ಪತ್ತೆಯಾಗಿತ್ತು ಎನ್ನಲಾಗಿದೆ.ಆ ಪಿಸ್ತೂಲ್ ಎತ್ತಿಕೊಂಡ ಸಿಬ್ಬಂದಿ ಆಪರೇಟ್‌ ಮಾಡಿ ಪರೀಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಇನ್ನೋರ್ವ ಸಿಬ್ಬಂದಿಗೆ ಅದರ ಗುಂಡು ತಗುಲಿದೆ‌ ಅವರನ್ನು ಕೂಡಲೇ ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಯಲಾಗಿದೆ.
ಈ ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಪಿಸ್ತೂಲ್ ನನ್ನು ಪೊಲೀಸರು  ವಶಕ್ಕೆ ಪಡೆದುಕೊಂಡಿದ್ದಾರೆ.ಅಲ್ಲಿದ್ದ ಪಿಸ್ತೂಲ್ ಯಾರದ್ದು..? ಅಲ್ಲಿ ಹೇಗೆ ಬಂತು ?.ಆ ಬಟ್ಟೆ ಮಳಿಗೆಯಲ್ಲಿ ತಂದಿಟ್ಟಿದ್ದು ಯಾರು..? ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬರಬೇಕಿದೆ.

ಉಡುಪಿ ನಗರ ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *