ಮಂಗಳೂರು ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆ ಸಮಯದಲ್ಲಿ ಆದಲು – ಬದಲು ಆರೋಪ – ಉನ್ನತ ಮಟ್ಟದ ತನಿಖೆಗೆ ಜಿಲ್ಲಾಧಿಕಾರಿಗೆ ಮನವಿ

ಮಂಗಳೂರಿನ ಸರಕಾರಿ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಹೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ತಂಗಿಯು ಭವ್ಯ 9 ತಿಂಗಳ ಗರ್ಭಿಣಿಯಾಗಿದ್ದು ದಿನಾಂಕ 17-08-2024 ಶನಿವಾರ ರಾತ್ರಿ ಚೆಕ್‌ಅಪ್‌ ಮಾಡಿಸುವ ಸಲುವಾಗಿ ಬಂಟ್ವಾಳದ ಸರಕಾರಿ. ಆಸ್ಪತ್ರೆಗೆಂದು ಹೋದಾಗ ಅಲ್ಲಿನ ವೈದ್ಯರು ಚೆಕ್‌ಅಪ್‌ ಮಾಡಿ ಇಲ್ಲಿ ಮಹಿಳಾ ವೈದ್ಯರು ಇರದ ಕಾರಣ ತಾವು ಮಂಗಳೂರಿನ ಸರಕಾರಿ ಲೇಡಿಗೋಷನ್‌ ಆಸ್ಪತ್ರೆಗೆ ನನ್ನ ತಂಗಿಯನ್ನು ಕರೆದುಕೊಂಡು ಹೋಗುವಂತೆ ತಿಳಿಸಿದರು.

ಅವರ ಮಾತಿನಂತೆ ನಾನು ನನ್ನ ತಂಗಿಯನ್ನು 17-08-2024 ರಂದು ಶನಿವಾರ ತಡರಾತ್ರಿ ಮಂಗಳೂರಿನ ಸರಕಾರಿ ಲೇಡಿಗೋಷನ್‌ ಹೆರಿಗೆ ಆಸ್ಪತ್ರೆಗೆ ಸೇರಿಸಿರುತ್ತೇವೆ. ದಿನಾಂಕ 18-08-2024 ಆದಿತ್ಯವಾರ ಬೆಳೆಗ್ಗೆ 10.30 ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತಾಳೆ. ಈ ವೇಳೆ ಆಸ್ಪತ್ರೆಯ ವೈದ್ಯರು ಮಗು ನಾರ್ಮಲ್‌ ಇದೆ ಎಂದು ತಿಳಿಸಿದರು. ಇವತ್ತಿಗೆ 3 ದಿನ ಕಳೆದರೂ ಮಗುವನ್ನು ನಮಗೆ ತೋರಿಸಿರುವುದಿಲ್ಲ. ನಿನ್ನೆ ಸಂಜೆ ಮಂಗಳವಾರ ಸಂಜೆ ಏಕಾಏಕಿ ಬಂದು ಮಗುವಿಗೆ ಒಂದು ಕಣ್ಣಿಲ್ಲ ಎಂದು ತಿಳಿಸಿರುತ್ತಾರೆ.

ಇದರಿಂದ ನಮಗೆ ಆಘಾತವಾಗಿದ್ದು. ಈ ಬಗ್ಗೆ ವೈದ್ಯರು ಹಾಗೂ ಅವರ ಮೇಲಾಧಿಕಾರಿಗಳು ಸೂಕ್ತ ಕಾರಣ ನೀಡದೆ ನುಣುಚಿಕೊಳ್ಳುತ್ತಿದ್ದಾರೆ. ಹಾಗೂ ನಾವು ಅವರಲ್ಲಿ ವೈದ್ಯಕೀಯ ರಿಪೋರ್ಟ್‌ಗಳನ್ನು ಕೇಳುವಾಗಲೂ ಕೊಡದಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿರುತ್ತದೆ. ನನ್ನ ತಂಗಿಯು ಮಗುವಿಗೆ ಎದೆ. ಹಾಲು ಉಣಿಸಲು 3 ದಿನ ಕಳೆದರೂ ಅವಕಾಶ ನಿರಾಕರಿಸಲಾಗಿದೆ. ನಾವು ಚಿಂತಾಕ್ರಾಂತರಾಗಿದ್ದು, ನನ್ನ ತಂಗಿಗೆ ಹಾಗೂ ಮಗುವಿಗೆ ಅನ್ಯಾಯವಾಗಿದ್ದು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆದುದರಿಂದ ನಾವು ತಮ್ಮನ್ನು ಕೋರುವುದೇನೆಂದರೆ ನನ್ನ ತಂಗಿ ಭವ್ಯ ಮತ್ತು ನಮ್ಮ ಕುಟುಂಬಕ್ಕೆ ಆದ ಅನ್ಯಾಯದ ಬಗ್ಗೆ ತಾವು ನ್ಯಾಯ ಒದಗಿಸಲು ಮತ್ತು ಇದರ ಬಗ್ಗೆ ಸರಕಾರದಿಂದ ಉನ್ನತ ಮಟ್ಟದ ತನಿಖೆ ನಡೆಸಲು ತುಳುನಾಡ ರಕ್ಷಣಾ ವೇದಿಕೆ ಸಂಘಟನೆಯ ವತಿಯಿಂದ ಪತ್ರಿಕಾಗೋಷ್ಠಿ, ಧರಣಿ ಸತ್ಯಾಗ್ರಹ ಪತ್ರಿಭಟನಾ ಸಭೆಗಳನ್ನು ಹಮ್ಮಿಕೊಳ್ಳಬೇಕೆಂದು ಭವ್ಯರವರ ಅಣ್ಣ ಸಂತೋಷ್ ಸಹಕಾರ ಕೋರಿದ್ದು ಈ ಹಿನ್ನೆಲೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ನಿಯೋಗದಲ್ಲಿ ಕೇಂದ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ನಿಶ್ಮಿತಾ, ರಾಜೇಶ್, ನಿವೇದಿತ್ , ಗುರುದತ್, ಪ್ರದೀಪ್ , ಮತ್ತಿತರರು ಉಪಸ್ಥಿತರಿದ್ದರು. ನಿಯೋಗಕ್ಕೆ ಕೂಡಲೇ ಸ್ಪಂದಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Leave a Reply