Visitors have accessed this post 687 times.
ಉಡುಪಿ: ನಗರದಲ್ಲಿ ಬಸ್ ಚಾಲಕರಿಬ್ಬರಿಗೆ ರಿಕ್ಷಾದಲ್ಲಿ ಬಂದ ತಂಡವೊಂದು ಚೂರಿಯಲ್ಲಿ ಇರಿದ ಘಟನೆ ಬನ್ನಂಜೆಯಲ್ಲಿ ಸಂಭವಿಸಿದೆ.
ಜೆಎಮ್‌ಟಿ ಬಸ್ ಚಾಲಕರಾದ ಸಂತೋಷ ಹಾಗೂ ಶಿಶರ್ ಕೆಲಸ ಮುಗಿಸಿ ಬನ್ನಂಜೆ ಕಡೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ರಿಕ್ಷಾದಲ್ಲಿ ಬಂದಿದ್ದ ಖಾಸಗಿ ಬಸ್ ವೊಂದರ ಮ್ಯಾನೇಜರ್ ಹಾಗೂ ಚಾಲಕರಾದ ಬುರನ್ ಮತ್ತು ಸುದೀಪ್ ಅಡ್ಡಗಟ್ಟಿ ಚೂರಿ ಇರಿದಿದ್ದಾರೆ ಎಂದು ತಿಳಿಯಲಾಗಿದೆ.
ಪರ್ಯಾಯ ದಿನದಂದು ಉಡುಪಿ ಸಿಟಿ ಬಸ್ ಚಾಲಕರ ನಡುವೆ ಗಲಾಟೆ ನಡೆದಿತ್ತು. ಇದರ ವಿಚಾರವಾಗಿ ನಗರ ಠಾಣೆಯಲ್ಲಿ ರಾಜಿ ಪಂಚಾಯಿತಿ ನಡೆಸಿ ಕಳುಹಿಸಲಾಗಿತ್ತು ಎನ್ನಲಾಗಿದೆ.
ಆದರೆ ಬಳಿಕ ರಾತ್ರಿ ಮೂವರಿದ್ದ ತಂಡವು ಈ ಕೃತ್ಯ ಎಸಗಿದ್ದು ಗಾಯಳು ಬಸ್ ಚಾಲಕರು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಡುಪಿ ನಗರ ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.