‘ಫೋಟೋಶೂಟ್’ ಮಾಡಿಸ್ಬೇಡ ಎಂದ ಪೋಷಕರು : ವಿದ್ಯಾರ್ಥಿನಿ ಆತ್ಮಹತ್ಯೆ

21 ವರ್ಷದ ವಿದ್ಯಾರ್ಥಿನಿ ವರ್ಷಿಣಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೋಷಕರು ಫೋಟೋಶೂಟ್ ಬೇಡ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

ಬೆಂಗಳೂರಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ ವರ್ಷಿಣಿಗೆ ಫೋಟೋಶೂಟ್ ಹವ್ಯಾಸವಿತ್ತು.

ಮಾಲ್ ನಲ್ಲಿ ಫೋಟೋ ಶೂಟ್ ಇದೆ ನಾನು ಹೋಗುತ್ತೀನಿ ಎಂದು ವರ್ಷಿಣಿ ತನ್ನ ಪೋಷಕರ ಹತ್ತಿರ ಹೇಳಿದ್ದಾಳೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪೋಷಕರು ಫೋಟೋಶೂಟ್ ಗೆ ಹೋಗೋದು ಬೇಡ ಎಂದು ಗದರಿದ್ದಾರೆ. ಈ ಹಿನ್ನೆಲೆ ಮನನೊಂದ ವಿದ್ಯಾರ್ಥಿನಿ ವರ್ಷಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ .

ಬೆಂಗಳೂರಿನ ಸುಧಾಮನಗರದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ 21 ವರ್ಷ ವಯಸ್ಸಿನ ವರ್ಷಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಯನಗರದ ಕಮ್ಯುನಿಟಿ ಕಾಲೇಜಿನಲ್ಲಿ ಈಕೆ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಅಲ್ಲದೇ ಕಾಲೇಜಿನಲ್ಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಈಕೆ ಸಿಟ್ಟಿನಲ್ಲಿ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ.

Leave a Reply