October 13, 2025
WhatsApp Image 2024-01-03 at 9.08.42 PM

ಶ್ರೀರಾಮ ಜನ್ಮಭೂಮಿ ಆಂದೋಲನದ ಸಂದರ್ಭದಲ್ಲಿ ದಾಖಲಾದ ಸುಳ್ಳು ಪ್ರಕರಣಗಳನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಹೇರಲು ಪಿತೂರಿ ನಡೆಸುತ್ತಿದೆ. 30-35 ವರ್ಷಗಳಷ್ಟು ಹಳೆಯ ಪ್ರಕರಣಗಳು, ಅದರಲ್ಲಿ ಅನೇಕ ಜನರು ಸಾವನ್ನಪ್ಪಿವೆ ಮತ್ತು 70 ರಿಂದ 80 ವರ್ಷದೊಳಗಿನ ಹೆಚ್ಚಿನ ಬದುಕುಳಿದವರನ್ನು ಈ ಪ್ರಕರಣವನ್ನು ಮರುತನಿಖೆ ನಡೆಸುವ ಮೂಲಕ ರಾಮಭಕ್ತರನ್ನು ಹಿಂಸಿಸಲಾಗತ್ತಿದೆ. ಶ್ರೀರಾಮ ಜನ್ಮಭೂಮಿ ಆಂದೋಲನದ ಸಂದರ್ಭದಲ್ಲಿ ದಾಖಲಾಗಿದ್ದ ಸುಳ್ಳು ಪ್ರಕರಣಗಳು ಹೆಚ್ಚಿನವು ಬೋಗಸ್ ಆಗಿದ್ದರಿಂದ ಹಿಂದಿನ ಕೆಲವು ಸರ್ಕಾರಗಳು ನಂತರ ಅವುಗಳನ್ನು ರದ್ದುಗೊಳಿಸಿದವು. ಇಂದು, ಆ ಕೇಸನ್ನು ಮರುತನಿಖೆ ನಡೆಸಲು ಆದೇಶಿಸಿ ಬದುಕುಳಿದ ಆ ಕಾರ್ಯಕರ್ತರನ್ನು ಮತ್ತೆ ಬಂಧಿಸಲಾಗುತ್ತಿದೆ. ಈ ಎಲ್ಲ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಸರ್ಕಾರ ರಾಮ ವಿರೋಧಿ ಧೋರಣೆಯನ್ನು ತೋರ್ಪಡಿಸುತ್ತಿದೆ.
ಶ್ರೀರಾಮ ಜನ್ಮಭೂಮಿ ಆಂದೋಲನದ ಸಂದರ್ಭದಲ್ಲಿ ದಾಖಲಾದ ಸುಳ್ಳು ಪ್ರಕರಣಗಳನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ತಕ್ಷಣ ಕೈಬಿಡಬೇಕು ಮತ್ತು ಯಾವುದೇ ಕಾರಣಕ್ಕೂ ರಾಮಭಕ್ತರನ್ನು ಬಂಧಿಸಬಾರದು ಎಂದು ಆಗ್ರಹಿಸುತ್ತೇನೆ. ಮರುತನಿಖೆ ಹೆಸರಿನಲ್ಲಿ ಬಂಧಿಸಿದರೆ ಇದಕ್ಕೆ ಕರ್ನಾಟಕದ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಎಂದು ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದರು.

About The Author

Leave a Reply