Visitors have accessed this post 1164 times.
ರಿಯಾದ್ : ಮಲಗುವ ಕೋಣೆ ಬಿಸಿಯಾಗಿಡಲು ಹೋಗಿ ಇಬ್ಬರು ಭಾರತೀಯ ಕಾರ್ಮಿಕರು ಉಸಿರು ಕಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಸೌದಿ ಅರೇಬಿಯಾದ ದಮ್ಮಮ್ ನಲ್ಲಿ ನಡೆದಿದೆ.
ಚಳಿಗಾಲವಾಗಿದ್ದರಿಂದ ಕೋಣೆಯನ್ನು ಬಿಸಿಯಾಗಿಡಲು ಕೋಣೆಯಲ್ಲಿ ಇದ್ದಿಲು ಹಾಕಿ ಇವರು ನಿದ್ರೆಗೆ ಜಾರಿದ್ದರು ಎನ್ನಲಾಗಿದೆ. ತಮಿಳುನಾಡು ಮೂಲದವರಾದ ಕಲ್ಲಕುರ್ಚಿ ನಿವಾಸಿ ಮುಸ್ತಫಾ ಹಾಗೂ ವಲಮಂಗಳ ನಿವಾಸಿ ಮೀರಾ ಮೊಯ್ದಿನ್ ತಾಜ್ ಮೊಹಮ್ಮದ್ ಮೃತ ದುರ್ದೈವಿಗಳಾಗಿದ್ದಾರೆ. ಹೌಸ್ ಡ್ರೈವರ್ ಆಗಿ ಕೆಲಸಮಾಡುತ್ತಿದ್ದ ಇವರು ರಾತ್ರಿ ಅಡುಗೆ ಮಾಡಿ ಬಾಕಿಯಾದ ಇದ್ದಿಲನ್ನು ತಮ್ಮ ಕೋಣೆಯೊಳಗಿಟ್ಟು ನಿದ್ರಿಸಿದ್ದರು. ರಾತ್ರಿಯಲ್ಲಿ ಕೋಣೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆಂದು ಪೋಸ್ಟ್ ಮಾರ್ಟಮ್ ರಿಪೋರ್ಟ್ ಹೇಳಿದೆ. ಸೌದಿ ಅರೇಬಿಯಾದಲ್ಲಿ ದಿನದಿಂದ ದಿನಕ್ಕೆ ಚಳಿ ವಿಪರೀತವಾಗುತ್ತಿದ್ದು, ಚಳಿಯಿಂದ ತಮ್ಮನ್ನು ರಕ್ಷಿಸಲು ಇಲೆಕ್ಟ್ರಿಕ್ ಹೀಟರ್ ಅಥವಾ ಇಂತಹ ಇದ್ದಿಲುಗಳನ್ನು ಬಳಸುವಾಗ ಬಹಳ ಜಾಗೃತೆ ವಹಿಸಬೇಕಾದ ಅಗತ್ಯವಿದೆ.