August 30, 2025
WhatsApp Image 2024-01-12 at 10.33.43 AM

ಗ್ಯಾಂಗ್ ರೇಪ್ ಪ್ರಕರಣವಾಗಿ ಬದಲಾದ ಹಾನಗಲ್ ನೈತಿಕ ಪೊಲೀಸ್ ಗಿರಿ ಕೇಸ್ : ಮೂವರು ಅರೆಸ್ಟ್ಬೆಂಗಳೂರು : ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆ ಹೊಸ ಹೇಳಿಕೆ ನೀಡಿದ ನಂತರ ಹಾನಗಲ್ ಪೊಲೀಸರು ಏಳು ಜನರ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ಎಫ್ ಐ ಆರ್ ಗೆ ಐಪಿಸಿ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ) ಸೇರಿಸಿದ್ದಾರೆ.

ಏಳು ಮಂದಿಯ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ.

ಸಂತ್ರಸ್ತೆ ಗುರುವಾರ ಸಾಮೂಹಿಕ ಅತ್ಯಾಚಾರದ ಹೊಸ ಆರೋಪಗಳನ್ನು ಮಾಡಿದ ನಂತರ, ಪೊಲೀಸರು ಅವಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಅವಳ ಹೇಳಿಕೆಯನ್ನು ದಾಖಲಿಸಿದ್ದಾರೆ. ಸಂತ್ರಸ್ತೆ ಸಾಮೂಹಿಕ ಅತ್ಯಾಚಾರದ ಆರೋಪ ಮಾಡಿದ್ದಾರೆ ಮತ್ತು ಅದರ ಆಧಾರದ ಮೇಲೆ ಸಂಬಂಧಿತ ಐಪಿಸಿ ಸೆಕ್ಷನ್ ಗಳನ್ನು ಎಫ್‌ಐಆರ್ ಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 8 ರಂದು ಹಾವೇರಿಯ ಹಾನಗಲ್ ನ ಹೋಟೆಲ್ ಕೋಣೆಗೆ ನುಗ್ಗಿದ ಪುರುಷರ ಗುಂಪು ಅಂತರ್ಧರ್ಮೀಯ ಜೋಡಿಯನ್ನು ಥಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ಪ್ರಕಾರ, ತನ್ನನ್ನು ಬೈಕ್ ನಲ್ಲಿ ಕರೆದೊಯ್ದು ಕಾಡಿನ ಮೂರು ಸ್ಥಳಗಳಲ್ಲಿ ಅತ್ಯಾಚಾರ ಎಸಗಲಾಗಿದೆ. ಹಾನಗಲ್ ನ ಬಸ್ ನಿಲ್ದಾಣದ ಬಳಿ ಮೂವರು ಪುರುಷರು ತನ್ನನ್ನು ಕಾರಿನಿಂದ ಹೊರಗೆ ಎಸೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಬುಧವಾರ, ಪುರುಷರ ಗುಂಪು ಹೋಟೆಲ್ ಸಿಬ್ಬಂದಿಯಂತೆ ನಟಿಸಿ ಜೋಡಿಗಳು ತಂಗಿದ್ದ ಕೋಣೆಗೆ ನುಗ್ಗಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವ್ಯಕ್ತಿಯನ್ನು ಥಳಿಸಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದರು. ಜೋಡಿಗಳು ಬಿಟ್ಟು ಬಿಡುವಂತೆ ಬೇಡಿಕೊಂಡರೂ ಆರೋಪಿಗಳು ಅವರ ಮಾತಿಗೆ ಕಿವಿಗೊಡದೇ ಹಲ್ಲೆ ನಡೆಸಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

About The Author

Leave a Reply