Visitors have accessed this post 560 times.

ಕಲ್ಲಡ್ಕ ಭಟ್ ವಿರುದ್ಧ ಪ್ರತಿಭಟಿಸಿದ ಡಿವೈಎಫ್ ಐ – ಉಳ್ಳಾಲ ಠಾಣಾಗೆ ಮುತ್ತಿಗೆ ಹಾಕಲು ಯತ್ನಿಸಿದ ಡಿವೈಎಫ್ ಐ ಕಾರ್ಯಕರ್ತರು

Visitors have accessed this post 560 times.

ಉಳ್ಳಾಲ ಠಾಣಾಗೆ ಡಿವೈಎಫ್ ಐ ಸಂಘಟನೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಜ.16ರ ಮಂಗಳವಾರ ನಡೆದಿದೆ.

ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಭಟ್ ವಿರುದ್ಧ ಪ್ರತಿಭಟಿಸಿದ ಡಿವೈಎಫ್ ಐ ಮುಖಂಡರ ಮೇಲೆ ಪ್ರಕರಣ ದಾಖಲು ಮಾಡಿದ ಹಿನ್ನಲೆಯಲ್ಲಿ ಉಳ್ಳಾಲ ಠಾಣಾಗೆ ಡಿವೈಎಫ್ ಐ ಮುತ್ತಿಗೆ

ಹಾಕಲು ಯತ್ನಿಸಿದೆ. ಈ ವೇಳೆ ಮುಂಜಾಗ್ರತ ಕ್ರಮವಾಗಿ ಠಾಣೆಗೆ ಬೀಗ ಹಾಕಿ ಪೊಲೀಸರು ಸುರಕ್ಷತೆ ನೀಡಿದ ಘಟನೆಯೂ ನಡೆಯಿತು.

ಆರ್ ಎಸ್ಎಸ್ ಹಾಗೂ ಶಾಸಕರ ಚೇಲಾಗಳಂತೆ ಪೊಲೀಸರು ವರ್ತಿಸುತ್ತಿದ್ದಾರೆ ಎಂದು ಡಿವೈಎಫ್ ಐ ಆರೋಪಿಸಿ ಮಾಸ್ತಿಕಟ್ಟೆಯಿಂದ ಉಳ್ಳಾಲ ಠಾಣೆವರೆಗೆ ರ್ಯಾಲಿ ನಡೆಸಿ ಘೋಷಣೆಗಳೊಂದಿಗೆ ಘೋಷಣೆಗಳೊಂದಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಮುತ್ತಿಗೆ ಹಾಕಿಲು ಯತ್ನಿಸಿದರು. ಡಿವೈಎಫ್ ಐ ಪ್ರತಿಭಟನೆ ಹಿನ್ನಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪೊಲೀಸರು ಉಳ್ಳಾಲ ಠಾಣೆಯ ಸುತ್ತಮುತ್ತ ನಿಯೋಜಿಸಲಾಗಿತ್ತು, ಯಾಉದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *