ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಆಗಿದೆ. ಅರ್ಚಕರು ವೇದ-ಮಂತ್ರ ಪಠಿಸಿ ಮೂರ್ತಿಯೊಳಗೆ ದೇವರನ್ನು ಆವಾಹನೆ ಮಾಡಿದ್ದು, ಮೊದಲು ನೇತ್ರೋನ್ಮಿಲನ, ಚಿನ್ನದ ಸೂಜಿಯಿಂದ ಕಣ್ಣು ತೆರೆದು ಕನ್ನಡಿ, ಹಸು, ಹಣ್ಣು-ಹಂಪಲು ತೋರಿಸಿ ರಾಮನ ಮೂರ್ತಿಗೆ ನೈವೆೇದ್ಯ ನೀಡಿದ ಬಳಿಕ ಪ್ರಾಣ ಪ್ರತಿಷ್ಠಾಪನೆ ಪೂರ್ಣವಾಗಿದೆ.
ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿಯನ್ನು ನೋಡಬೇಕೆಂಬ ಶತಕೋಟಿ ಭಕ್ತರ ಕಸನು ನನಸಾಗುತ್ತಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಂಪನ್ನಗೊಳ್ಳಲಿದೆ. ಈಗಾಗಲೇ ಪೂಜಾ ವಿಧಿವಿಧಾನಗಳು ನಡೆಯುತ್ತಿದ್ದು, ದೇಶದ ಕೋಟ್ಯಂತರ ರಾಮನ ಭಕ್ತರ ಚಿತ್ತ ಅಯೋಧ್ಯೆ ಮೇಲಿದೆ.