
ಬ್ರಹ್ಮಾವರ:ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಜನವರಿ. 21 ರಂದು ಉಡುಪಿಯ ಬ್ರಹ್ಮಾವರದ ಕುಮ್ರ ಗೋಡು ಎಂಬಲ್ಲಿ ನಡೆದಿದೆ.



ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಸಾದ ಕುಮಾರ್, ಆರೋನ್, ಸಂತೋಷ ಎಂಬವರನ್ನು ಬಂಧಿಸಲಾಗಿದೆ.ಬಂಧಿತರಿಂದ ಕೋಳಿ ಅಂಕಕ್ಕೆ ಬಳಸಲಾದ ಒಂದು ಕೋಳಿ ಮತ್ತು ಏಳು ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.