October 29, 2025
WhatsApp Image 2024-01-24 at 5.00.04 PM

ಮಂಗಳೂರು: ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್(ಉಲಾಯಿ-ಪಿದಾಯಿ) ಜೂಜಾಟವಾಡುತ್ತಿದ್ದ 29 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಜ. 21 ರಂದು ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಲ್ಪಾಡಿ ಗ್ರಾಮದ ಬಂಡಸಾಲೆ ಎಂಬ ಮನೆಯೊಂದರಲ್ಲಿ ಕೆಲವು ಜನರು ಸೇರಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅಂದರ್-ಬಾಹರ್(ಉಲಾಯಿ-ಪಿದಾಯಿ) ಎಂಬ ಅದೃಷ್ಟದ ಜೂಜಾಟ ಆಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಬೆಳಗಿನ ಜಾವ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು 29 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಂದ ನಗದು ಹಣ ಹಾಗೂ ಆಟಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಲಾಗಿದೆ. ಸ್ವಾಧೀನ ಪಡಿಸಿಕೊಂಡ ಸೊತ್ತುಗಳಾದ 1,75,450 ರೂ ನಗದು ಹಣ, ಇಸ್ಪೀಟ್ ಎಲೆಗಳು-52, ಟೇಬಲ್-4, ಚೇರ್-10, ರೆಕ್ಸಿನ್ ಕವರ್-1 ನನ್ನು ಸ್ವಾದೀನ ಪಡಿಸಿಕೊಳ್ಳಲಾಯಿತು

ಈ ಜೂಜಾಟವನ್ನು ನಿತ್ಯಾನಂದ ,ವಿಲ್ಫ್ರೇಡ್ ಮತ್ತು ರೆಹಮಾನ್ ಎಂಬವರು ತಮ್ಮ ಲಾಭಕ್ಕೋಸ್ಕರ ಆಡಿಸುತ್ತಿದ್ದರು. ನಿತ್ಯಾನಂದ ಮತ್ತು ರೆಹಮಾನ್ ಓಡಿ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದರು.

ಈ ಪತ್ತೆ ಕಾರ್ಯವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಐಪಿಎಸ್ ರವರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್ ಐಪಿಎಸ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಶ್ರೀ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ರವರ ನೇತೃತ್ವದಲ್ಲಿ ಆರೋಪಿ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಯವರು ಪಾಲ್ಗೋಂಡಿದ್ದರು.”

About The Author

Leave a Reply