October 13, 2025
WhatsApp Image 2024-01-25 at 12.35.55 PM (1)

ದಿನಾಂಕ 20 ಮತ್ತು 21 ಜನವರಿ 2024ರ ಶನಿವಾರ ಮತ್ತು ರವಿವಾರದಂದು ಚಿಕ್ಕಮಗಳೂರಿನ ಇನ್ ಫ್ಯಾಂಟ್ ಜೀಸಸ್ ಶಾಲೆಯಲ್ಲಿ ನಡೆದ ರಾಜ್ಯಮಟ್ಟದ ಫ್ರೀಡಂ ಕಪ್ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಹಯಾತುಲ್ ಇಸ್ಲಾಂ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸಿ ವಿಶೇಷ ಸಾಧನೆ ಮಾಡಿದ್ದು ಐದು ಚಿನ್ನದ ಪದಕ, ಐದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ತನ್ನದಾಗಿಸಿಕೊಂಡಿರುತ್ತಾರೆ.

ಅಹಮದ್ ರಿಶಾಮ್ ರಾಯಿಫ್ (7 ನೇ ತರಗತಿ) ಹಾಗೂ ಮುಹಮ್ಮದ್ ಝಿಯಾನ್ ( 3ನೇ ತರಗತಿ) ಮೊಹಮ್ಮದ್ ಶಯಾನ್ ( UKG ) ಮೊಹಮ್ಮದ್ ಅಶಶ್ ( 4 ನೇ ತರಗತಿ ) ಅಜೀಜ್ ಸಲ್ಮಾನ್ ಫಾರಿಶ್ ( 3ನೇ ತರಗತಿ) ಚಿನ್ನದ ಪದಕ ಗೆದ್ದರೆ, ನಬೀಲ್ ಹುಸೈನ್ (3ನೇ ತರಗತಿ) ಶಾಹಿಫಾ ಅಮೀನ (3 ನೇ ತರಗತಿ) ಝಮಿಲ್ ಮದ್ದ (3ನೇ ತರಗತಿ ) ಫಾಝಿಲ್ ರಾಜ್ವಿ ( 5ನೇ ತರಗತಿ) ಮೊಹಮ್ಮದ್ ಸವಾಜ್(6 ನೇ ತರಗತಿ) ಬೆಳ್ಳಿ ಪದಕ ಜಯಿಸಿರುತ್ತಾರೆ. ಆದಿಲ್ ಶಾನ್ (3ನೇ ತರಗತಿ) ಶಫಫ್ (4ನೇ ತರಗತಿ) ಮೊಹಿನುದ್ದೀನ್ ( 4ನೇ ತರಗತಿ) ಕಂಚಿನ ಪದಕ ವಿಜೇತರು.

ಚಿಕ್ಕಮಗಳೂರು ಜಿಲ್ಲಾ ಟೇಕ್ವಾಂಡೋ ಅಸೋಸಿಯೇಶನ್ ಹಾಗೂ ವಿವೇಕಾನಂದ ಫಿಟ್ ನೆಸ್ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಲ್ಪಟ್ಟ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಚಾಲಕರು, ಸದಸ್ಯರು, ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ. ಉಪ್ಪಿನಂಗಡಿ ಮೂಲದ ಶಿಹಾಬ್ ಟಿ , ಹಾಗೂ ಸವಾಜ್ ಕರಾಟಪಟುಗಳಿಗೆ ತರಬೇತಿ ನೀಡಿರುತ್ತಾರೆ.

About The Author

Leave a Reply