Visitors have accessed this post 308 times.

SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ಸುರತ್ಕಲ್ ಕಡಲ ಕಿನಾರೆಯಲ್ಲಿ ವೈಭವದ ಗಣರಾಜ್ಯೋತ್ಸವ ಹಾಗೂ ಸಂವಿದಾನ ದೀಕ್ಷೆ ಕಾರ್ಯಕ್ರಮ

Visitors have accessed this post 308 times.

ಮಂಗಳೂರು : ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಸುರತ್ಕಲ್ ಸಮೀಪದ ಇಡ್ಯಾ ಕಡಲ ಕಿನಾರೆಯಲ್ಲಿ SDPI ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ರವರ ನೇತೃತ್ವದಲ್ಲಿ ನಾವು ಬಾರತೀಯರು ಎಂಬ ಘೋಷಣೆಯೊಂದಿಗೆ 75 ನೇ ಗಣರಾಜ್ಯೋತ್ಸವ ಹಾಗೂ ಸಂವಿದಾನ ದೀಕ್ಷೆಯನ್ನು ಇಂದು ವೈಭವ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಬೆಳಿಗ್ಗೆ ನಡೆದ ಕಾರ್ಯಕ್ರಮವನ್ನು SDPI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತುರು ರವರು ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಲಾಯಿತು ಬಳಿಕ ನಡೆದ ಸಬಾ ಕಾರ್ಯಕ್ರಮದಲ್ಲಿ ಗಣರಾಜ್ಯೋತ್ಸವದ ಸಂದೇಶವನ್ನು ನೀಡಿದ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಯವರು ಸಂವಿಧಾನದ ಮಹತ್ವವನ್ನು ವಿವರಿಸಿದರು.Dr ಬಾಬಾ ಸಾಹೇಬ್ ಅಂಬೇಡ್ಕರ್ ರವರು ಅತ್ಯಂತ ಘನತೆ ಗೌರವ, ಸಮಾನತೆ, ಬಹುತ್ವ, ದೇಶದ ನಾಗರಿಕರಿಗೆ ಪರಮಾಧಿಕಾರ ನೀಡುವ, ಪ್ರಜಾಪ್ರಭುತ್ವದ ಭದ್ರ ಬುನಾದಿ ಹೊಂದಿರುವ ಜಗತ್ತಿನ ಸರ್ವ ಶ್ರೇಷ್ಠ ಸಂವಿದಾನವನ್ನು ಭಾರತೀಯರಾದ ನಮಗೆ ಕೊಡುಗೆಯಾಗಿ ನೀಡಿದ್ದಾರೆ, ಆದರೆ ಸಂವಿದಾನ ಸಮರ್ಪಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆಡಳಿತ ನಡೆಸುತ್ತಿರುವ ಸಂವಿದಾನ ವಿರೋಧಿ ಸಿದ್ದಾಂತ ಹೊಂದಿರುವ ಮನುವಾದಿ ಶಕ್ತಿಗಳು ಇಂದು ಸಂವಿದಾನವನ್ನು ದುರ್ಬಲ ಗೊಳಿಸುತ್ತಿರುವ ಗರಿಷ್ಟ ಪ್ರಯತ್ನದಲ್ಲಿ ತೊಡಗಿದ್ದಾರೆ ಇದರಿಂದ ಸಂವಿಧಾನದ ಆಶಯಗಳಿಗೆ ಅಪಾಯ ಬಂದೊದಗಿದೆ ಇದನ್ನು ಭಾರತೀಯರಾದ ನಾವೆಲ್ಲರೂ ಏಕತೆಯಿಂದ ಪ್ರತಿರೋಧಿಸಿ ಸಂವಿದಾನವನ್ನು ಉಳಿಸುವ ಮೂಲಕ ಗಣತಂತ್ರ ವ್ಯವಸ್ಥೆಯನ್ನು ಸಂರಕ್ಷಿಸಬೇಕು ಎಂದು ಸಂದೇಶ ನೀಡಿದರು.

ಕಾರ್ಯಕ್ರಮದ ಪ್ರಮುಖ ಅಂಗವಾದ ಸಂವಿದಾನ ದೀಕ್ಷೆಯನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಯವರು ಸಂವಿಧಾನದ ಪೀಠಿಕೆಯನ್ನು ಸಾರ್ವಜನಿಕವಾಗಿ ಬೋಧಿಸುವ ಮೂಲಕ ಪ್ರತಿಜ್ಞಾ ವಾಚನವನ್ನು ನೆರವೇರಿಸಿದರು, ವಿಮೆನ್ ಇಂಡಿಯಾ ಮೂವಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಶಾ ವಾಮಂಜೂರು ಸಂವಿದಾನದ ಮಹತ್ವಗಳ ಬಗ್ಗೆ ಸಂಧರ್ಬೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಪುಟಾಣಿ ಮಕ್ಕಳಿಂದ ಸ್ವಾತಂತ್ರ ಹೋರಾಟಗಾರರು ಮತ್ತು ಸಂವಿಧಾನದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮಹನೀಯರ ವೇಷಭೂಷಣವು ಗಮನ ಸೆಳೆದಿತ್ತು.

ಈ ಸಂದರ್ಭದಲ್ಲಿ SDPI ರಾಜ್ಯ ಮಾಧ್ಯಮ ಮುಖ್ಯಸ್ಥರಾದ ರಿಯಾಜ್ ಕಡಂಬು, ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್, ಮಂಗಳೂರು ಉತ್ತರ ಕ್ಷೇತ್ರದ ಅಧ್ಯಕ್ಷರಾದ ಉಸ್ಮಾನ್ ಗುರುಪುರ, ಜಿಲ್ಲಾ ಮಾಧ್ಯಮ ಉಸ್ತುವಾರಿ ಬಶೀರ್ ಬೊಳ್ಳಾಯಿ ಸುರತ್ಕಲ್ ಬ್ಲಾಕ್ ಅಧ್ಯಕ್ಷರಾದ ಸಲಾಂ ಕಾನ, ಚೊಕ್ಕಬೆಟ್ಟು ಐದನೇ ವಾರ್ಡಿನ ಕಾರ್ಪೊರೇಟರ್ ಶಂಶಾದ್ ಅಬೂಬಕ್ಕರ್, ಕಿಲ್ರಿಯ ಮಸ್ಜಿದ್ ಮತ್ತು ಮದ್ರಸ ಇದರ ಆಡಳಿತ ಸಮಿತಿಯ ಅಧ್ಯಕ್ಷರಾದ ಇಲ್ಯಾಸ್, ಕಿಲ್ರಿಯ ಯೆಂಗ್ ಮೆನ್ಸ್ ಅಸ್ಸೊಸಿಯೆಷನ್ ಅಧ್ಯಕ್ಷರಾದ ಅಮೀರ್ ಗುತ್ತು, ಬ್ರಧರ್ಸ್ ಸ್ಪೋಟ್ಸ್ ಇಡ್ಯಾ ಇದರ ಅಧ್ಯಕ್ಷರಾದ ಯಾಕುಬ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಶ್ರಫ್ ಅಡ್ಡೂರು ಸ್ವಾಗತ ಭಾಷಣ ಮಾಡಿದರು ಶಂಸುದ್ದೀನ್ ಕೃಷ್ಣಾಪುರ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ಅರ್ಪಿಸಿದರು.

Leave a Reply

Your email address will not be published. Required fields are marked *