October 13, 2025
WhatsApp Image 2024-01-28 at 5.41.42 PM

ಬಂಟ್ವಾಳ: ಗುಡ್ಡವೊಂದರಲ್ಲಿ ಹುಲ್ಲುಗಾವಲಿಗೆ ಬೆಂಕಿ ಇಡಲು ಹೋದ ಪತಿ ಪತ್ನಿ ಇಬ್ಬರೂ ಸಜೀಹ ದಹನಗೊಂಡ ಘಡನೆ ಬಂಟ್ವಾಳ ತಾಲೂಕಿನ ಲೋರೆಟ್ಟೋ ಸಮೀಪದ ತುಂಡು ಪದವು ಎಂಬಲ್ಲಿ ಇಂದು ಮಧಾಹ್ನ ವೇಳೆ ನಡೆದಿದೆ.

ಲೊರೆಟ್ಟೊಪದವು ತುಂಡುಪದವು ನಿವಾಸಿ, ಕ್ರಿಸ್ಟಿನ್ ಕಾರ್ಲೋ(51) ಹಾಗೂ ಗಿಲ್ಬರ್ಟ್ ಕಾರ್ಲೊ (65) ಮೃತಪಟ್ಟವರು.

ಇವರ ಮನೆಯ ಸಮೀಪದಲ್ಲಿ ರುವ ಗುಡ್ಡದ ಲ್ಲಿರುವ ಮುಳಿ ಹುಲ್ಲು ತೆಗೆಯುವ ಉದ್ದೇಶದಿಂದ ಅದಕ್ಕೆ ಬೆಂಕಿ ನೀಡಿದ್ದರು. ಮಧ್ಯಾಹ್ನ ಅಗಿದ್ದ ಕಾರಣ ಬೆಂಕಿಯ ಜ್ವಾಲೆ ಇವರಿಗೆ ಹತ್ತಿಕೊಂಡಿರಬೇಕು ಎಂದು ಹೇಳಲಾಗಿದೆ.

ಬಂಟ್ವಾಳ ನಗರ ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ;

About The Author

Leave a Reply